ಕೋಳಿ ಜಗಳಕ್ಕೆ ವ್ಯಕ್ತಿ ಕೊಲೆ !

Kannada News

13-07-2017

ಮೈಸೂರು: ಮೈಸೂರಿನಲ್ಲಿ ಕಳೆದ ಜಿಲ್ಲಾ ತಾಲ್ಲೂಕು ಪಂಚಾಯ್ತಿ ಚುನಾವಣೆಯಲ್ಲಿ ಹೊಗೆಯಾಡುತ್ತಿದ್ದ ಹಳೇ ವೈಷಮ್ಯದ ಸಂಬಂಧ, ಮುಂದುವರೆದಿದ್ದ ಹಗೆತನ ಇಂದು ಕೊಲೆಯೊಂದಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಕಾರ್ಯಕರ್ತರಿಂದ ಮಾರಾಣಾಂತಿಕ ಹಲ್ಲೆಗೊಳಗಾಗಿದ್ದ ಜೆಡಿಎಸ್ ಕಾರ್ಯಕರ್ತ ಸಾವುನ್ನಪ್ಪಿದ್ದಾನೆ. ಮೈಸೂರು ತಾಲ್ಲೂಕು ಬೋರೆ ಆನಂದೂರು ಗ್ರಾಮದ ಜೆಡಿಎಸ್ ಮುಖಂಡ ಮಂಜನಾಥ್ ಮೇಲೆ ಕಳೆದ ಶುಕ್ರವಾರ ನಡೆದಿದ್ದ ಮಾರಣಾಂತಿಕ ಹಲ್ಲೆಯಿಂದ ಮೃತಪಟ್ಟಿದ್ದಾರೆ. ಸ್ಥಳೀಯ ಕಾಂಗ್ರೆಸ್ ಪಕ್ಷದ ಮುಖಂಡ ರಾಮೇಗೌಡ ಬೆಂಬಲಿಗರಾದ ನಾರಾಯಣ್ ಮತ್ತು ಪುನೀತ್ ಎಂಬುವರು ಮಂಜುನಾಥ್ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಬೋರೆ ಆನಂದೂರು ಗ್ರಾಮದಲ್ಲಿ ಕೋಳಿ ಮೇಲೆ ಬೈಕ್ ಹರಿಸಿದ್ದ ಪುನೀತ್ ಮತ್ತು ನಾರಾಯಣ್ ಅವರಿಂದ ಮಂಜುನಾಥ್ ಇತ್ತೀಚೆಗೆ ದಂಡ ಕೂಡ ಕಟ್ಟಿಸಿದ್ದರು. ಇದರಿಂದ ಕುಪಿತಗೊಂಡಿದ್ದ ಪುನೀತ್ ಮತ್ತು ನಾರಾಯಣ್ ಕಳೆದ ಶುಕ್ರವಾರ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ ಮಂಜುನಾಥ್ ರನ್ನು ಮೈಸೂರಿನ ಬೃಂದಾವನ ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದ್ದಾರೆ. ಈ ಸಂಬಂಧ ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಈ ಪ್ರಕರಣ ಮತ್ತೊಂದು ತಿರುವು ಕಡೆದುಕೊಂಡಿದ್ದು, ತನಗೆ ಜೀವ ಭಯ ಇರುವುದನ್ನು ಈ ಮೊದಲು ಮಂಜುನಾಥ್ ಹೇಳಿಕೊಂಡಿದ್ದ ಎಂದು ತಿಳಿದು ಬಂದಿದೆ. ಶಾಸಕ ಜಿ.ಟಿ ದೇವೇಗೌಡರ ಬಳಿ ತನಗೆ ಜೀವ ಬೆದರಿಕೆ ಇರುವುದನ್ನು ಮಂಜುನಾಥ್ ಹೇಳಿಕೊಂಡಿರುವ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಮತ್ತು  ತನಗೆ ಹೋದಲ್ಲಿ ಬಂದಲ್ಲಿ ವಿರೋಧಿಗಳು ಬೆದರಿಕೆ ಹಾಕುತ್ತಿರುವ ಬಗ್ಗೆ ಅಳಲು ತೋಡಿಕೊಂಡಿದ್ದರು. ಮಂಜುನಾಥ್ ಸಾವನ್ನಪ್ಪಿದ ನಂತರ ಸ್ಥಳೀಯರ ಮೊಬೈಲ್ ಗಳಲ್ಲಿ ದೃಶ್ಯಾವಳಿ ಎಲ್ಲೆಡೆ ಹರಿದಾಡುತ್ತಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ