ಹಂಪಿಯಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ !

Kannada News

13-07-2017

ಬಳ್ಳಾರಿ: ವಿಶ್ವ ವಿಖ್ಯಾತ ಹಂಪಿಯ ಕಡ್ಡಿರಾಂಪುರ ಬಳಿಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದೆ. ಉದ್ದನಪ್ಪ ತೋಟದ ಬಳಿಯ ಕಲ್ಲು ಗುಡ್ಡದ ಮೇಲೆ ಕಾಣಿಸಿಕೊಂಡಿರುವ ಚಿರತೆ, ಸುಮಾರು ಮೂರು ಗಂಟೆಗಳ ಕಾಲ ಒಂದೇ ಕಲ್ಲು ಬಂಡೆಯ ಮೇಲೆ ಕುಳಿತು ಭಯದ ವಾತಾವರಣ ಹುಟ್ಟಿಸಿತ್ತು. ಇನ್ನು ಇದೇ ಕಲ್ಲು ಗುಡ್ಡದ ಮೇಲೆ ಕಳೆದ ಐದು ತಿಂಗಳ ಹಿಂದೆ ಜೋಡಿ ಚಿರತೆಗಳು ಪ್ರತ್ಯಕ್ಷವಾಗಿದ್ದು ಈ ಗುಡ್ಡಕ್ಕೆ ಚಿರತೆ ಗುಡ್ಡ ಎಂದೇ ಹೆಸರು ಬಂದಿತ್ತು. ನಂತರ ಈ ಜೋಡಿ ಚಿರತೆಗಳಿಂದ ಸ್ಥಳೀಯರಿಗಾಗಲಿ ಅಥವಾ ಪ್ರವಾಸಿಗರಿಗಾಗಲಿ ತೊಂದರೆಯಾದೀತೆಂಬ ಭಯದಿಂದ ಇಲ್ಲಿದ್ದ ಜೋಡಿ ಚಿರತೆಗಳನ್ನ ಪಟಾಕಿ ಸಿಡಿಮದ್ದು ಸಿಡಿಸಿ ಅಲ್ಲಿಂದ ಓಡಿಸಲಾಗಿತ್ತು. ಇದಾದ ಐದು ತಿಂಗಳ ಬಳಿಕ ಮತ್ತೆ ಈ ಸ್ಥಳದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಆದರೆ ಹಂಪಿಯಲ್ಲಿನ ಈ ಚಿರತೆಗಳಿಂದ ಇದುವರೆಗೆ ಯಾವುದೇ ತೊಂದರೆಯಾಗಿಲ್ಲ, ಎಂದು ತಿಳಿದು ಬಂದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ