ಕೂಡಿ ಹಾಕಿದ್ದ ಮಹಿಳೆ ಬಿಡುಗಡೆ !

Kannada News

12-07-2017

ಪಣಜಿ: 20 ವರ್ಷಗಳಿಂದ ಮಹಿಳೆಯೊಬ್ಬಳನ್ನು ಒಂದೇ ರೂಮಿನಲ್ಲಿ ಕೂಡಿಹಾಕಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ. ಗೋವಾ ರಾಜ್ಯದ ಕಂಡೋಲಿಮ್ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಮಾರು 50 ವರ್ಷದ ಮಹಿಳೆಯನ್ನು ತನ್ನ ಕುಟುಂಬಸ್ಥರೇ ಕೂಡಿಹಾಕಿದ್ದು, ಆಹಾರ ಮತ್ತು ನೀರನ್ನು ಕಿಟಕಿಯಿಂದಲೇ ನೀಡುತ್ತಿದ್ದು, ಮಾನವೀಯತೆ ಮರೆತಿದ್ದಾರೆ. 20 ವರ್ಷಗಳಿಂದ ಒಂದೇ ಕೊಠಡಿಯಲ್ಲಿ ನರಳುತ್ತಿದ್ದ, ಈ ಮಹಿಳೆ ವಿಚಾರವನ್ನು ಸ್ವಯಂ ಸೇವಾ ಸಂಸ್ಥೆಯೊಂದು ಪೊಲೀಸರಿಗೆ ತಿಳಿಸಿದ್ದು, ತಕ್ಷಣ ಎಚ್ಚೆತ್ತ ಪೊಲೀಸರು, ಮಾಹಿತಿಯನ್ನಾಧರಿಸಿ ಮನೆಗೆ ತೆರಳಿದಾಗ ಪ್ರಕರಣ ತಿಳಿದು ಬಂದಿದೆ. ಪೊಲೀಸರು ಮನೆಯಲ್ಲಿ ಬಾಗಿಲು ಹಾಕಿದ್ದ ಕೊಠಡಿಯನ್ನು ತೆರೆಯಲು ಹೇಳಿದಾಗ, ಅಲ್ಲಿ ಮಹಿಳೆಯೊರ್ವಳು ನಗ್ನ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಆ ಮಹಿಳೆಯು ಅಸ್ವಸ್ಥವಾಗಿರುವುದು ತಿಳಿದು ಬಂದಿದೆ. ಈ ಮಹಿಳೆ ಇರುವ ಮನೆಯಲ್ಲಿ, ಅವರ ಇಬ್ಬರು ಸಹೋದರರು ನಿವಾಸವಿದ್ದಾರೆ. ಈ ಕುರಿತು ಪರಿಶೀಲನೆ ನಡಿಸಿದ ಪೊಲೀಸರು,  ಈ ಮಹಿಳೆ ಯಾರಿಗೂ ತಿಳಿಯದಂತೆ, ಕೆಲ ವರ್ಷಗಳ ಹಿಂದೆ ಮುಂಬೈನಲ್ಲಿ ಮದುವೆಯಾಗಿದ್ದರು. ನಂತರದಲ್ಲಿ ತಾನು ವಿವಾಹವಾದ ಗಂಡನಿಗೆ ಈಗಾಗಾಲೆ ಮದುವೆಯಾಗಿದ್ದು, ಮೋಸಹೋಗಿರುವುದಾಗಿ ನೊಂದು, ಆತನನ್ನು ಬಿಟ್ಟು ವಾಪಸ್ ಮನೆಗೆ ಬಂದಿದ್ದಳು. ಮನೆಗೆ ಬಂದಾಗಿನಿಂದ ವಿಚಿತ್ರವಾಗಿ ವರ್ತಿಸುತ್ತಿದ್ದು, ಕುಟುಂಬಸ್ಥರಿಗೆ ಭಾರಿ ತೊಂದರೆ ಕೊಡುತ್ತಿದ್ದಳು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ರೀತಿ ವಿಚಿತ್ರವಾಗಿ ವರ್ತಿಸುತ್ತಿದ್ದ ಈಕೆಯನ್ನು 20 ವರ್ಷಗಳಿಂದ ಕೂಡಿ ಹಾಕಲಾಗಿದೆ ಎಂದು ತಿಳಿಸಿದರು. ಇದೀಗ ಅಸ್ವಸ್ಥ ಮಹಿಳೆಯನ್ನು ಪೊಲೀಸರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದೂ, ಕುಟುಂಬಸ್ಥರ ವಿರುದ್ಧ ಕ್ರಮ ಕೈಗೊಂಡಿದ್ದಾರೆ.   ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ