3 ಜಿಲ್ಲೆಯಲ್ಲಿ ಪೊಲೀಸರ ವಿರುದ್ಧ ಹೆಚ್ಚು ದೂರು !

Kannada News

12-07-2017 396

ಕೊಪ್ಪಳ: ಉಡುಪಿ,ಮಂಗಳೂರು, ಬೆಂಗಳೂರಿನಲ್ಲಿ ಪೊಲೀಸ್ ವಿರುದ್ದ ಹೆಚ್ಚು ದೂರು ದಾಖಲಾಗಿವೆ ಎಂದು, ರಾಜ್ಯ ಪೊಲೀಸ ದೂರು ಪ್ರಾಧಿಕಾರದ ಅಧ್ಯಕ್ಷ ಎ.ಎಸ್ ಪಾಚಪುರೆ ಹೇಳಿದ್ದಾರೆ. ಕೊಪ್ಪಳ, ಹಾವೇರಿ ಜಿಲ್ಲೆಯಲ್ಲಿ ಪೊಲೀಸರ ವಿರುದ್ಧ ದೂರು ದಾಖಲಾಗಿಲ್ಲ, ತಿಳುವಳಿಕೆ ಪ್ರಮಾಣ ಕಡಿಮೆ‌ ಇದ್ದಲ್ಲಿ, ಕಡಿಮೆ ದೂರು ದಾಖಲಾಗಿವೆ. ಸಾರ್ವಜನಿಕ ಜಾಗೃತಿ ಹೆಚ್ಚು ಇದ್ದಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಲಿವೆ ಎಂದರು. ಪ್ರಾಧಿಕಾರ ರಚನೆಯಾಗಿ ೪ ವರ್ಷ ಪೂರೈಸಿದೆ. ಜನರಲ್ಲಿ ಪ್ರಾಧಿಕಾರದ ಕುರಿತು ಇನ್ನೂ ಮಾಹಿತಿ ಗೊತ್ತಾಗಬೇಕಿದೆ. ವಿವಿಧ ಜಿಲ್ಲೆಗಳಲ್ಲಿ ಪ್ರಾಧಿಕಾರದ ಕಾರ್ಯ ವಿಧಾನದ ಕುರಿತು ಜಾಗೃತಿ ಕಾರ್ಯಕ್ರಮ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಡಿ.ಎಸ್.ಪಿ ಹಂತದ ಕೆಳಗಿನ ಪ್ರಕರಣ ಎಸ್.ಪಿ ಮತ್ತು ಡಿಸಿಗೆ ದೂರು ಕೊಡಬೇಕು. ಎಸ್.ಪಿ, ಮೇಲ್ಮಟ್ಟದ ದೂರು ಇದ್ದರೆ ರಾಜ್ಯ ಪ್ರಾಧಿಕಾರಕ್ಕೆ ದೂರು ಕೊಡಬೇಕು ಆಯಾ ಹಂತದಲ್ಲಿ ಪ್ರಕರಣ ವಿಚಾರಣೆ ನಡೆಯಲಿವೆ ಎಂದರು. ಪೊಲೀಸ್ ದೂರು ಪ್ರಾಧಿಕಾರದಿಂದ ಹೆಲ್ಪ್ ಲೈನ್ ಆರಂಭದ ಚಿಂತನೆ ನಡೆಸಿದ್ದೇವೆ ಎಂದು ಇದೇ ವೇಳೆ ತಿಳಿಸಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ