ರೈಲ್ವೆ ಯೋಜನೆಗೆ ಅಧ್ಯಯನ ಬೇಕು !

Kannada News

12-07-2017

ಹಾಸನ: ಚಿಕ್ಕಮಗಳೂರು-ಸಕಲೇಶಪುರ ನಡುವಿನ ನೂತನ ರೈಲ್ವೆ ಯೋಜನೆ ನಿರ್ಮಾಣ ಹಿನ್ನೆಲೆಯಲ್ಲಿ, ಯೋಜನೆಯಿಂದ ಆಗಬಹುದಾದ ಪರಿಣಾಮಗಳ ಸಮರ್ಥ ಅಧ್ಯಯನಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಸೂಚನೆ ನೀಡಿದ್ದಾರೆ. ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಾಸನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಭೆ ನಡೆದಿದ್ದು, ಖರಾಬು ಕೆರೆ ಕಟ್ಟೆ ಸ್ಮಶಾನ ಅರಣ್ಯ ಸೇರಿದಂತೆ ಹಿಡುವಳಿ ಜಮೀನು ಹೊಂದಿರುವ ರೈಲ್ವೆ ಮಾರ್ಗ, ಸಾಮಾಜಿಕ ಪರಿಣಾಮ ಅಧ್ಯಯನಕ್ಕಾಗಿ ಜಿಜೀವಿ ರೂರಲ್ ಎಜುಕೇಷನ್ ಡೆವೆಲಪ್ಮೆಂಟ್ ಸೊಸೈಟಿ ಗೆ ಟೆಂಡರ್ ನೀಡಲಾಗಿದೆ. ಈ ಕುರಿತು ಶೀಘ್ರವೇ ವರದಿ ನೀಡಿ ಎಂದು ಸೂಚಿಸಲಾಗಿದೆ. ಸಭೆಯಲ್ಲಿ ಜಿಲ್ಲಾಧಿಕಾರಿ ಚೈತ್ರ ಮತ್ತು ಜಿಲ್ಲಾ ಪಂಚಾಯತಿ ಸಿಇಓ ವೆಂಕಟೇಶ್ ಹಾಗೂ ಶಾಸಕರಾದ ರೇವಣ್ಣ, ಭಾಗಿಯಾಗಿದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ