ಲೈಂಗಿಕ ದೌರ್ಜನ್ಯ ನಾಟಕವಾಡಿದ ಯುವತಿ !

Kannada News

12-07-2017 676

ಬೆಂಗಳೂರು: ಪೀಣ್ಯದಲ್ಲಿ ಒಡಿಶಾ ಮೂಲದ ಯುವತಿಯೊಬ್ಬಳು ಪರಿಚಯಸ್ಥ ಯುವಕನೊಬ್ಬನನ್ನು ಮನೆಗೆ ಕರೆಸಿಕೊಂಡು, ಸಂಬಂಧಿಕರು ಬಂದಾಗ ಆತ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ನಾಟಕ ಮಾಡಿ ಪೊಲೀಸರನ್ನು ಪೇಚಿಗೆ ಸಿಲುಕಿಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಪರಿಚಯಮಾಡಿಕೊಂಡಿದ್ದ ಲೇಸರ್ ಕಟ್ಟಿಂಗ್ ಕಾರ್ಖಾನೆಯ ಉದ್ಯೋಗಿ, ಪೂನಾ ಮೂಲದ ಯುವಕನನ್ನು ತಡರಾತ್ರಿ ಮನೆಗೆ ಕರೆಸಿಕೊಂಡಿದ್ದ ಯುವತಿ, ಆತನೊಂದಿಗಿದ್ದಾಗ ಯಾವುದೇ ಪೂರ್ವ ಸೂಚನೆಯಿಲ್ಲದೆ ಏಕಾಎಕಿ ಯುವತಿಯ ಚಿಕ್ಕಮ್ಮ ಮನೆಗೆ ಬಂದಿದ್ದಾರೆ. ದಿಕ್ಕು ತೋಚದ ಯುವತಿ ಈತ ನನ್ನ ಮೇಲೆ ದೌರ್ಜನ್ಯ ಎಸಗುತ್ತಿದ್ದಾನೆ, ಅತ್ಯಾಚಾರಕ್ಕೆ ಯತ್ನಿಸುತ್ತಿದ್ದಾನೆ, ವಾರದಿಂದ ಫಾಲೋ ಮಾಡುತ್ತಿದ್ದಾನೆ ಎಂದು ಕಥೆ ಕಟ್ಟಿದ್ದಾಳೆ. ಅದನ್ನು ಕೇಳಿದ ಚಿಕ್ಕಮ್ಮ ಬೊಬ್ಬೆ ಹಾಕಿದ್ದು, ನೆರೆ ಹೊರೆಯವರು ಜಮಾಯಿಸಿದ್ದಾರೆ. ಪ್ರೀತಿಗಾಗಿ ಬಂದು ತೊಂದರೆಗೆ ಸಿಕ್ಕಿಬಿದ್ದಿದ್ದರಿಂದ ಕಂಗಾಲಾದ ಯುವಕ ದಿಕ್ಕು ತೋಚದೆ ಸ್ಥಳದಿಂದ ಪರಾರಿಯಾಗಿದ್ದಾನೆ. ಅಷ್ಟರಲ್ಲಾಗಲೇ ಯುವತಿ ಸಂಬಂಧಿಕರೊಂದಿಗೆ ಠಾಣೆಗೆ ತೆರಳಿ ದೂರನ್ನೂ ನೀಡಿದ್ದಾಳೆ. ಗಂಭೀರವಾಗಿ ಪರಿಗಣಿಸಿದ ಪೀಣ್ಯ ಪೊಲೀಸರು ಕಾರ್ಯಾಚರಣೆ ನಡೆಸಿ ಯುವಕನನ್ನು ಬಂಧಿಸಿ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಯುವತಿಯ ಬಣ್ಣ ಬಯಲಾಗಿದ್ದು, ಆಕೆಯೇ ಮನೆಗೆ ಕರೆದಿದ್ದು, ಸಂಬಂಧಿ ಬಂದಾಗ ನಾಟಕಮಾಡಿದ್ದಾಳೆ ಎಂದಿದ್ದಾನೆ. ಪೊಲೀಸರು ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ