ಅಪ್ರಾಪ್ತೆಗೆ ಲೈಂಗಿಕ ಕಿರುಕುಳ !

Kannada News

12-07-2017

ಹಾವೇರಿ: ರಾಣಿಬೆನ್ನೂರಿನಲ್ಲಿ ಬಸ್ ಚಾಲಕ ಮತ್ತು ನಿರ್ವಾಹಕರಿಂದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿರುವುದು ಬೆಳಕಿಗೆ ಬಂದಿದೆ. ಆರೋಪಿಗಳನ್ನು ಪೊಲೀಸರು ಬಸ್ ಸಹಿತ ವಶಕ್ಕೆ ತೆಗೆದುಕೊಂಡಿದ್ದಾರೆ. ರಾಣೆಬೆನ್ನೂರು ಬಸ್ ನಿರ್ವಾಹಕ ಯುವರಾಜ್ ಕಟ್ಟೆಕಾರ(62), ಚಾಲಕ ವೀರಯ್ಯ ಹಿರೇಮಠ್(38), ಚಾಲಕ ಕಂ ನಿರ್ವಾಹಕ ರಾಘವೇಂದ್ರ ಬಡಗೇರ ಬಂಧಿತ ಆರೋಪಿಗಳು. ಮೂಲತ: ಬಾಗಲಕೋಟೆಯ ಅಪ್ರಾಪ್ತ ಬಾಲಕಿ, ಉಡುಪಿಯಲ್ಲಿ ವಾಸವಿದ್ದೂ, 15 ದಿನಗಳ ಹಿಂದೆ ಹಿರೇಕೆರೂರಿನ ಪ್ರಿಯಕರನ ಮಾತಿಗೆ ಮರುಳಾಗಿ, ಪ್ರಿಯಕರನ ಮನೆಗೆ ಹೋಗಿದ್ದಳು. ಈ ವೇಳೆ ಪ್ರಿಯಕರನ ಕುಟುಂಬ ಅಪ್ರಾಪ್ತೆ ಎಂಬ ಕಾರಣಕ್ಕೆ ಮನೆಯವರ ಒತ್ತಡ ಬಂದ ಹಿನ್ನಲೆಯಲ್ಲಿ, ಮತ್ತೆ ವಾಪಸ್ ತೆರಳಲು ಪ್ರಿಯಕರ ಉಡುಪಿ ಬಸ್ ಹತ್ತಿಸಿದ್ದನು. ಈ ವೇಳೆ ಬಸ್ಸಿನಲ್ಲಿದ್ದ ಈ ಮೂರು ಜನ ಅಪ್ರಾಪ್ತೆಯೊಂದಿಗೆ ಸಲುಗೆಯಿಂದ ಮಾತನಾಡಿ, ಉಡುಪಿಗೆ ಬಿಡುವುದಾಗಿ ಪುಸಲಾಯಿಸಿ, ಬಸ್ ಚಾಲಕ ಮತ್ತು ನಿರ್ವಾಹಕ ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ಬಗ್ಗೆ ಉಡುಪಿ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ. ಉಡುಪಿ ಪೋಲಿಸರು ಆರೋಪಿಗಳನ್ನು ಬಂಧಿಸಿದ್ದು, ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಸಿಕೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ