ಖೈದಿಗಳಿಗೆ ಗಾಂಜಾ ಸಪ್ಲೈ: ಇಬ್ಬರ ಬಂಧನ !

Kannada News

12-07-2017

ಬೆಂಗಳೂರು: ಖೈದಿಗಳಿಗೆ ಗಾಂಜಾ ಪೂರೈಸುತ್ತಿದ್ದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತು ಓರ್ವ ಪರಾರಿಯಾಗಿದ್ದಾನೆ. ಬಂಧಿತ ಆರೋಪಿಗಳು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಗಾಂಜಾ ಸಾಗಿಸುತ್ತಿದ್ದರು. ಬಿರಿಯಾನಿ ಪೊಟ್ಟಣದ ತಳಭಾಗದಲ್ಲಿಟ್ಟು ಗಾಂಜಾ ಸಾಗಿಸುತ್ತಿದ್ದ ಅಸಾಮಿಗಳು, ಹಣದ ಆಸೆಗಾಗಿ ಕೃತ್ಯ ನಡೆಸಿರುವುದಾಗಿ ತಿಳಿದು ಬಂದಿದೆ. ಜೈಲಿನ ಭದ್ರತಾಪಡೆ ಚೆಕಿಂಗ್ ಪಾಯಿಂಟ್ ನಲ್ಲಿ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾರೆ. ಹೆಸರಘಟ್ಟ ಮುಖ್ಯರಸ್ತೆ ಕುಂಬಾರಹಳ್ಳಿ ನಿವಾಸಿಗಳಾದ ಅರುಣ್ ಕುಮಾರ್(೨೯), ಪವನ್ (೨೦) ಬಂಧಿತರು. ಸಲೀಂ ಎನ್ನುವ ಇನ್ನೋರ್ವ ತಪ್ಪಿಸಿಕೊಂಡಿದ್ದಾನೆ. ನಿನ್ನೆ ಮಧ್ಯಾಹ್ನ ಪರಪ್ಪನ ಅಗ್ರಹಾರದ ಸಜಾಬಂಧಿಯೊಬ್ಬರಿಗೆ ಆಹಾರ ನೀಡುವ ನೆಪದಲ್ಲಿ ಬಿರಿಯಾನಿ ತಂದಿದ್ದರು, ಅದೇ ಬಿರಿಯಾನಿ ಪಟ್ಟಣದ ಕೆಳಗೆ ಗಾಂಜಾ ಕಂಡುಬಂದಿದ್ದು, ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಗಿದ್ದೂ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ