ಕೊಲೆ ಆರೋಪಿಗಳಿಂದ ದರೋಡೆ !

Kannada News

12-07-2017

ಮೈಸೂರು: ಮೈಸೂರಿನಲ್ಲಿ ಹಾಡಹಗಲೇ 30 ಲಕ್ಷ ರೂಪಾಯಿ ದರೋಡೆ ಮಾಡಿದ್ದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದೆ. ಮೈಸೂರಿನ ಗೋಕುಲಂನಲ್ಲಿ ಕಳೆದ ಜೂನ್ 23 ರಂದು ದರೋಡೆ ನಡೆದಿತ್ತು. ಪೆರೋಲ್ ಮೇಲೆ ಬೆಳಗಾವಿಯ ಹಿಂಡಲಗಾ ಜೈಲಿನಿಂದ ಹೊರಬಂದಿದ್ದ, ಕೊಲೆ ಆಪಾದಿತನ ತಂಡದಿಂದ ಈ ಕೃತ್ಯ ನಡೆದಿರುವ ಸಂಗತಿ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಪ್ರಕರಣ ಪ್ರಮುಖ ರೂವಾರಿ ಸಲೀಂ ಮತ್ತು ಆತನ ತಂಡ ಈ ಕೃತ್ಯ ಎಸಗಿದೆ. ಬೆಂಗಳೂರಿನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಳಗಾವಿಯ ಹಿಂಡಲಗಾ ಜೈಲು ಸೇರಿರುವ ಸಲೀಂ, ಇತ್ತೀಚೆಗೆ ಪೆರೋಲ್ ಮೇಲೆ ಹೊರಬಂದಿದ್ದಾಗ ಈ ದರೋಡೆ ನಡೆಸಿರುವುದು ತಿಳಿದು ಬಂದಿದೆ. ಖ್ಯಾತಿ ಸ್ಟೀಲ್ಸ್ ಮಾರ್ಕೆಟಿಂಗ್ ಕಂಪನಿಯಲ್ಲಿ ಸುಮಾರು 30 ಲಕ್ಷ ರೂಪಾಯಿ ದೋಚಿ ಪರಾರಿಯಾಗಿದ್ದರು. 7 ಮಂದಿ ದುಷ್ಕರ್ಮಿಗಳ ತಂಡ, ಕಛೇರಿಯಲ್ಲಿದ್ದ ಇಬ್ಬರು ನೌಕರರ ಮೇಲೆ ಹಲ್ಲೆ ನಡೆಸಿ ಹಣ ದೋಚಿ, ಸಿ.ಸಿ.ಕ್ಯಾಮರಾದ ಹಾರ್ಡ್ ಡಿಸ್ಕ್ ಅನ್ನೂ ಹೊತ್ತೊಯ್ದಿದ್ದರು. ಪ್ರಕರಣ ಸಂಬಂಧ ಈಗಾಗಲೇ ಆರೋಪಿಗಳಾದ ಅಫ್ಸರ್ ಪಾಷಾ, ಶಬ್ಬೀರ್ ಪಾಷಾ, ಜಾಕೀರ್ ಪಾಷಾ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ನಂತರ ಕೃತ್ಯ ಬಹಿರಂಗಗೊಂಡಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ಮೈಸೂರು ಕೊಲೆ ಆರೋಪಿಗಳಿಂದ ದರೋಡೆ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ