ಹೆತ್ತ ಮಗುವನ್ನೇ ಕೆರೆಗೆ ಎಸೆದ ತಾಯಿ !

Kannada News

12-07-2017 223

ಬೆಳಗಾವಿ: ಮೂರು ತಿಂಗಳ ಹಸಗೂಸನ್ನು ಕೆರೆಗೆ ಎಸೆದ ದಾರುಣ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಮಗುವಿಗೆ ಮೇಲಿಂದ ಮೇಲೆ ಕಾಯಿಲೆ ಬರುತ್ತಿತ್ತು, ಎಂಬ ಕಾರಣಕ್ಕೆ ಹೆತ್ತ ತಾಯಿಯೇ ಮಗುವನ್ನು ಕೆರೆಗೆ ಎಸೆದು ಹೋಗಿದ್ದಾಳೆ. ನೀರಿನಲ್ಲಿ ಮುಳುಗಿದ ಹಸುಗೂಸು ಪ್ರಾಣ ಕಳೆದುಕೊಂಡಿದೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಯಮಕನಮರಡಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಶೃತಿ ಸಂತೋಷಕುಮಾರ ನಂದಗಾವಿ ಎಂಬ ಮಹಿಳೆಯೇ ಈ ಕಟುಕ ತಾಯಿ. ಸ್ಥಳೀಯರ ಮಾಹಿತಿ ಮೇರೆಗೆ ಶೃತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಯಮಕನಮರಡಿಯಲ್ಲಿನ ಕುಡಿಯುವ ನೀರಿನ ಕೆರೆಗೆ, ಮಗುವನ್ನು ಎಸೆದು ಹೋಗಿದ್ದ ಮಹಾ ತಾಯಿ ಈಗ ಪೊಲೀಸರ ವಶದಲ್ಲಿದ್ದು, ವಿಚಾರಣೆ ನಡೆಸಿದ್ದಾರೆ. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


Vhhhg
  • h
  • y