ಕಾರು ಅಪಹರಿಸಿದ್ದ ದುಷ್ಕರ್ಮಿಗಳ ಬಂಧನ !

Kannada News

11-07-2017

ಬೆಂಗಳೂರು: ಹೆಬ್ಬಾಳಕ್ಕೆ ಹೋಗುವ ನೆಪಮಾಡಿ ಲಗ್ಗೆರೆಯಿಂದ ಮೆರು ಕ್ಯಾಬ್ ಕಾರನ್ನು ಕರೆಸಿಕೊಂಡು ಸ್ವಲ್ಪ ದೂರ ಹೋದ ನಂತರ ಚಾಲಕನಿಗೆ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿ ನಗದು ಮೊಬೈಲ್ ಕಸಿದು ಕಾರಿನ ಸಮೇತ ಪರಾರಿಯಾಗಿದ್ದ ನಾಲ್ವರು ದುಷ್ಕರ್ಮಿಗಳಲ್ಲಿ ಇಬ್ಬರನ್ನು ಬೆನ್ನಟ್ಟಿ ಕೆಂಗೇರಿ ಪೊಲೀಸರು ಹಿಡಿದಿದ್ದಾರೆ. ಬಂಧಿತರನ್ನು ನಾಗೇಶ್ ಹಾಗೂ ಕಾರ್ತಿಕ್ ಎಂದು ಗುರುತಿಸಲಾಗಿದೆ ಕ್ಯಾಬ್ ಚಾಲಕ ಹರೀಶ್ ಹಾಗೂ ಬಂಧಿತ ಆರೋಪಿಗಳಿಂದ ಮಾಹಿತಿ ಪಡೆದು ಪರಾರಿಯಾಗಿರುವ ಇನ್ನಿಬ್ಬರ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ.

ದುಷ್ಕರ್ಮಿಗಳು ದೋಚಿದ್ದ ಮೆರು ಕ್ಯಾಬ್ ವಶಕ್ಕೆ ಪಡೆಯಲಾಗಿದೆ. ಸೋಮವಾರ ರಾತ್ರಿ ನಾಲ್ಕು ಮಂದಿ ದುಷ್ಕರ್ಮಿಗಳು ಲಗ್ಗೆರಯಿಂದ ಹೆಬ್ಬಾಳಕ್ಕೆ  ಮೆರು ಕ್ಯಾಬ್ ಬುಕ್ ಮಾಡಿಕೊಂಡು ಹೊರಟು ಮಾರ್ಗ ಮಧ್ಯೆ ಚಾಲಕ ಹರೀಶ್ ಮೇಲೆ ಹಲ್ಲೆ ನಡೆಸಿ ಮಾರಕಾಸ್ತ್ರಗಳ ನ್ನ ತೋರಿಸಿ ಬೆದರಿಸಿ ಹಣ, ಮೊಬೈಲ್ ಕಿತ್ತುಕೊಂಡಿದ್ದರು. ಸಿಗ್ನಲ್ ಹತ್ತಿರ ಬರುತ್ತಿದ್ದಂತೆ ಕಾರು ನಿಧಾನ ಮಾಡಿ ಇಳಿದು ಹರೀಶ್ ತಪ್ಪಿಸಿಕೊಂಡು ತಕ್ಷಣ ನಮ್ಮ 100 ಗೆ ಕರೆ ಮಾಡಿ ಮಾಹಿತಿ ನೀಡಿದ್ದರು, ಹರೀಶ್ ಪರಾರಿಯಾದ ತಕ್ಷಣ ದುಷ್ಕರ್ಮಿಗಳಲ್ಲಿ ಓರ್ವ ಕಾರನ್ನ ಓಡಿಸಿಕೊಂಡು ಇತರರ ಜೊತೆ ಪರಾರಿಯಾಗಿದ್ದರು. ಕೊಡಿಗೇ ಹಳ್ಳಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪ್ರಕರಣ ದಾಖಲಿಸಿಕೊಂಡು, ಚಾಲಕನಿಗೆ ಹರೀಶ್‍ಗೆ ಚಿಕಿತ್ಸೆ ಕೊಡಿಸಿದ್ದರು. ದುಷ್ಕರ್ಮಿಗಳು ಕಾರು ದೋಚಿ ಪರಾರಿಯಾಗುತ್ತಿರುವುದು ಕಾರಿನ ಸಂಖ್ಯೆ ಆಧರಿಸಿ ಹತ್ತಿರದ ಮಾಹಿತಿ ಪೊಲೀಸ್ ಠಾಣೆಗಳಿಗೆ ರವಾನಿಸಲಾಗಿದ್ದು ಕೆಂಗೇರಿ ಬಳಿ ಕಾರು ಹೋಗುತ್ತಿರುವ ಮಾಹಿತಿ ಆಧರಿಸಿ ಕ್ಯಾಬ್‍ನ್ನು ಬೆನ್ನಟ್ಟಿದ ಕೆಂಗೇರಿ ಪೊಲೀಸ್ ಸಬ್‍ ಇನ್ಸ್ ಪೆಕ್ಟರ್ ನಂಜುಂಡಸ್ವಾಮಿ, ಎಎಸ್‍ಐ ಈಶ್ವರ್, ಮುಖ್ಯಪೇದೆ ಕಿರಣ್, ಕೆಂಗೇರಿ ಬಳಿ ಅಡ್ಡಗಟ್ಟಿದ್ದಾರೆ. ಕಾರು ಹಾಗು ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ ಎಂದು ಡಿಸಿಪಿ ಅನುಚೇತ್ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ