ಹಾಡಹಗಲೇ ವ್ಯಕ್ತಿಗೆ ಚೂರಿಯಿಂದ ಹಲ್ಲೆ !

Kannada News

11-07-2017 296

ಬೆಂಗಳೂರು: ಚನ್ನಪಟ್ಟಣದ ಸಾತನೂರು ಸರ್ಕಲ್ ಬಳಿ ಹಾಡಹಗಲೇ ಕಾರಿನಲ್ಲಿ ಬಂದ ದುಷ್ಕರ್ಮಿಗಳು ವ್ಯಕ್ತಿಯೋರ್ವನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಸಾತನೂರು ಸರ್ಕಲ್ ಬಳಿ ಶಾಹಿದ್ ಎಂಬಾತನನ್ನು ಚೂರಿಯಿಂದ ಮಂಗಳವಾರ ಬೆಳಿಗ್ಗೆ ಇರಿಯಲಾಗಿದ್ದು ರಕ್ತದ ಮಡುವಿನಲ್ಲಿಯೇ ಬಿದ್ದಿದ್ದ ಶಾಹಿದ್ ದೇಹದಲ್ಲಿದ್ದ ಚೂರಿಯೊಂದಿಗೆ ಸ್ವತಃ ತಾನೇ ಮೇಲೆ ಎದ್ದು ಚನ್ನಪಟ್ಟಣ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿದ್ದಾನೆ. ಕಾರಿನಲ್ಲಿ ಬಂದಿದ್ದ ಆರು ಜನ ದುಷ್ಕರ್ಮಿಗಳು ಶಾಹಿದ್‍ಗೆ ಚೂರಿಯಿಂದ ಇರಿದಿದ್ದಾರೆ. ಇದೀಗ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಇತ್ತೀಗಷ್ಟೆ ಅದೇ ಸ್ಥಳದಲ್ಲಿ ರೌಡಿ ಒಬ್ಬನ ಕೊಲೆಯಾಗಿತ್ತು. ಇದರ ಬೆನ್ನಲ್ಲೇ ಈ ಘಟನೆ ನಡೆದಿದೆ. ಸ್ಥಳಕ್ಕೆ ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ