ಮನೆ ಬಾಗಿಲು ಮುರಿದು ಕಳ್ಳತನ !

Kannada News

11-07-2017

ಬೆಂಗಳೂರು: ಚಂದ್ರಲೇಔಟ್‍ನ ನಿಸರ್ಗ ಅಪಾರ್ಟ್‍ಮೆಂಟ್‍ನ, ಮನೆಯೊಂದರ ಬಾಗಿಲು ಮುರಿದು ಸೋಮವಾರ ರಾತ್ರಿ ಒಳನುಗ್ಗಿ ನಗದು ಸೇರಿ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ದುಷ್ಕರ್ಮಿಗಳು ದೋಚಿ ಪರಾರಿಯಾಗಿದ್ದಾರೆ. ನಿಸರ್ಗ ಲೇಔಟ್‍ನ ಸ್ಕೈಲೈನ್ ಸಿಟಿ ಅಪಾರ್ಟ್‍ಮೆಂಟ್‍ ನ ಸೆಕ್ಯೂರಿಟಿ ಗಾರ್ಡ್‍ನ ಕಣ್ತಪ್ಪಿಸಿ, ರಾಜೀವ್ ಎಂಬುವರ ಮನೆಗೆ ನಿನ್ನೆ ರಾತ್ರಿ ನುಗ್ಗಿರುವ ದುಷ್ಕರ್ಮಿಗಳು 20 ಸಾವಿರ ನಗದು ಮತ್ತು ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ರಾಜೀವ್ ಅವರು ಕುಟುಂಬ ಸಮೇತ ಹೊರಹೋಗಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಚಂದ್ರಲೇಔಟ್ ಪೊಲೀಸರು ಅಪಾರ್ಟ್‍ಮೆಂಟ್‍ನ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿ ದುಷ್ಕರ್ಮಿಗಳ ಪತ್ತೆಗೆ ತೀವ್ರ ಶೋಧ ನಡೆಸಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ