ಕುಡಿದ ಮತ್ತಲ್ಲಿ ಯವಕನಿಗೆ ಇರಿತ !

Kannada News

11-07-2017

ಬೆಂಗಳೂರು: ಯಲಹಂಕದ ನಾಗೇನಹಳ್ಳಿ ಗೇಟಿನ ಬಾಲಾಜಿ ಬಾರ್ ನಲ್ಲಿ ಸೋಮವಾರ ರಾತ್ರಿ ಕಂಠಪೂರ್ತಿ ಕುಡಿದಿದ್ದ ಯುವಕರು ಜಗಳ ತೆಗೆದು ಯುವಕನೊಬ್ಬನಿಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ದುರ್ಘಟನೆ ನಡೆದಿದೆ. ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿರುವ ಕಾರು ಚಾಲಕ ನಾಗೇನಹಳ್ಳಿಯ ತ್ರಿಭುವನ್(24) ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಕೆಲದಿನಗಳಿಂದ ಹೆಬ್ಬಾಳದಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ತ್ರಿಭುವನ್ ರಾತ್ರಿ ಸ್ನೇಹಿತನ ಜೊತೆ ಮದ್ಯ ಸೇವಿಸಲು ಬಾಲಾಜಿ ಬಾರ್ ಬಂದಿದ್ದಾರೆ. ಮದ್ಯಸೇವಿಸುತ್ತಾ ಕುಳಿತಿದ್ದ ವೇಳೆ ಎದುರಿನ ಟೇಬಲ್‍ನಲ್ಲಿ ಕಂಠಪೂರ್ತಿ ಕುಡಿದಿದ್ದ 6 ಮಂದಿ ಯುವಕರು ಕ್ಷುಲಕ ಕಾರಣಕ್ಕೆ ಜಗಳ ಮಾಡಿ ಸಪ್ಲಯರ್ ಗೆ ಥಳಿಸಿ ಅವನಿಂದಲೂ ಹಣ ಕಿತ್ತಿದ್ದರು. ಸುಮ್ಮನಿರುವಂತೆ ಹೇಳಲು  ಹೋದ ತ್ರಿಭುವನ್‍ಗೆ ಚಾಕುವಿನಿಂದ ಇರಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಗಾಯಗೊಂಡ ತ್ರಿಭುವನ್ ಅವರನ್ನು ಕೊಲಂಬಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಯಲಹಂಕ ಉಪನಗರ ಪೊಲೀಸರು ಬಾರ್‍  ನಲ್ಲಿನ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿ ಆರೋಪಿಗಳ ಪತ್ತೆಗೆ ತೀವ್ರ ಶೋಧ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ