ಬಂದ್ ವಾಪಸ್ !

Kannada News

11-07-2017 160

ಬೆಂಗಳೂರು: ಅಖಿಲ ಭಾರತ ಪೆಟ್ರೋಲಿಯಂ ವಿತರಕರ ಸಂಘ (ಎಐಪಿಡಿಎ) ನಾಳೆ ಕರೆ ನೀಡಿದ್ದ ಬಂದ್ ಅನ್ನು ವಾಪಸ್ ತೆಗೆದುಕೊಂಡಿದೆ. ನಾಳೆ ಎಂದಿನಂತೆ ಪೆಟ್ರೋಲ್ ಮತ್ತು ಡಿಸೇಲ್ ದೇಶಾದ್ಯಂತ ಲಭ್ಯವಿರಲಿದೆ. ಅಖಿಲ ಭಾರತ ಪೆಟ್ರೋಲಿಯಂ ವಿತರಕರ ಸಂಘದ ಜೊತೆ ಮಾತುಕತೆ ನಡೆಸದೇ ಪ್ರತಿದಿನ ಪೆಟ್ರೋಲ್, ಡಿಸೇಲ್ ಬೆಲೆಯನ್ನು ಪರಿಷ್ಕರಣೆ ಮಾಡಬೇಕೆಂದು ಸರ್ಕಾರ ಆದೇಶಿಸಿತ್ತು. ಇದನ್ನು ಖಂಡಿಸಿ ನಾಳೆ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಕೇಂದ್ರೀಯ ಪೆಟ್ರೋಲಿಯಂ ಸಚಿವ ಹಾಗೂ ಸರ್ಕಾರಿ ಸ್ವಾಮ್ಯದ 3 ತೈಲ ಕಂಪನಿಗಳು ಎಐಪಿಡಿಎ ಗೆ ಪ್ರತಿಕ್ರಿಯಿಸಿವೆ. ಈ ತಿಂಗಳಾಂತ್ಯದೊಳಗೆ ಸಮಸ್ಯೆಯನ್ನು ಬಗೆಹರಿಸುವುದಾಗಿ ಪೆಟ್ರೋಲಿಯಂ ಸಚಿವರು ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಂದ್ ವಾಪಸ್ ತೆಗೆದುಕೊಳ್ಳಲು ಅಖಿಲ ಭಾರತ ಪೆಟ್ರೋಲಿಯಂ ವಿತರಕರ ಸಂಘ ನಿರ್ಧರಿಸಿದೆ. ಬಂದನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳಲಾಗಿದೆ. ಒಂದು ವೇಳೆ ಪೆಟ್ರೋಲಿಯಂ ಸಚಿವರು ಭರವಸೆಯನ್ನು ಈಡೇರಿಸದಿದ್ದರೆ ತಿಂಗಳಾಂತ್ಯದಲ್ಲಿ ಬಂದ್ ನಡೆಸುತ್ತೇವೆಂದು ಎಐಪಿಡಿಎ ಹೇಳಿದೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ