ಪ್ರಕರಣ ಮುಚ್ಚಿ ಹಾಕಲು ಸರ್ಕಾರ ಯತ್ನಿಸುತ್ತಿದೆ..?

Kannada News

11-07-2017

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 46 ದಿನಗಳಿಂದ 144 ಸೆಕ್ಷನ್ ಜಾರಿಯಲ್ಲಿದ್ದು, ಇದರ ನಡುವೆಯೇ ಶರತ್ ಎಂಬವರ ಕೊಲೆಯಾಗಿದೆ. ಗಲಭೆಗೆ ಕಾರಣರಾದವರು ಹಾಗೂ ಕೊಲೆಗಾರರನ್ನು ಕೊಡಲೆ ಬಂಧಿಸಬೇಕು, ಹಾಗೂ ರಾಷ್ಟ್ರೀಯ ತನಿಖಾದಳದಿಂದ ಪ್ರಕರಣದ ಸಮಗ್ರ ತನಿಖೆ ನಡೆಸಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ. ‌‌‌‌ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಲೆಗಾರರನ್ನು ಹಾಗೂ ಕೋಮು ಗಲಭೆಗೆ ಕಾರಣರಾದವರನ್ನು ರಕ್ಷಿಸಿ ಪ್ರಕರಣವನ್ನು ಮುಚ್ಚಿ ಹಾಕಲು ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು. ಡ್ರಗ್ ಮಾಫಿಯಾ, ಮರಳು ಮಾಫಿಯಾ ಹಾಗೂ ಗೋವುಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುವ ಮಾಫಿಯಾ, ಗಲಭೆಗೆ ಕುಮ್ಮಕ್ಕು ನೀಡುತ್ತವೆ. ಈ ಮಾಫಿಯಾಗಳನ್ನು ಕೂಡಲೆ ಬಂಧಿಸಿ ಶಾಂತಿ ಕಾಪಾಡಬೇಕು ಎಂದು ಒತ್ತಾಯಿಸಿದರು. ಎಲ್ಲಿಯ ತನಕ ಕೆಂಪಯ್ಯ ಅವರು ಗೃಹ ಇಲಾಖೆ ಸಲಹೆಗಾರರಾಗಿರುತ್ತರೋ ಅಲ್ಲಿಯ ತನಕ ಪೊಲೀಸ್ ಅಧಿಕಾರಿಗಳು ದಕ್ಷತೆಯಿಂದ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದರು. ದಕ್ಷಿಣ ಕನ್ನಡದ ಇಬ್ಬರು ಸಚಿವರಾದ ರಮಾನಾಥ್ ರೈ, ಯು.ಟಿ.ಖಾದರ್ ಗಲಭೆ ನಿಯಂತ್ರಿಸಲು ಸಂಪೂರ್ಣ ವಿಫಲರಾಗಿದ್ದು, ಅವರಿಬ್ಬರನ್ನು ಸಚಿವ ಸಂಪಟದಿಂದ ಕೈಬಿಡಬೇಕು ಎಂದ ಆಗ್ರಹಿಸಿದ್ದಾರೆ. ರಾಷ್ಟ್ರೀಯ ತನಿಖಾದಳದ ಕಚೇಯನ್ನು ಮಂಗಳೂರಿನಲ್ಲಿ ಆರಂಭಿಸಲು ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿದ್ದೇನೆ ಎಂದರು. ಅಲ್ಲದೇ ಓಟ್ ಬ್ಯಾಂಕ್ ರಾಜಕಾಣಕ್ಕಾಗಿ ಹಿಂದು ಯುವಕರ ಬಲಿ ಕೊಡಲು ನಾವು ಸಿದ್ದರಿಲ್ಲ ಎಂದಿದ್ದಾರೆ. ಹತ್ತು ತಿಂಗಳ ನಂತರ ಚುನಾವಣೆ ಪ್ರಕ್ರಿಯೆ ಅರಂಭವಾಗಲಿ ಆಗ ಯಾರು ಅಭ್ಯರ್ಥಿಯೆಂದು ಪಕ್ಷ ನಿರ್ಧರಿಸುತ್ತದೆ. ಈ ಕುರಿತು ಸಚಿವ ರಮಾನಾಥ್ ರೈ ಅವರ ಸವಾಲಿಗೆ ಈಗಲೆ ಪ್ರತಿಕ್ರಿಯಿಸುವುದಿಲ್ಲ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ