ಕುಡಿಯಲು ನೀರಿಲ್ಲದಿದ್ದಾಗ ಪ್ರಜಾಪ್ರಭುತ್ವ ಯಾರಿಗಾಗಿ..?

Kannada News

11-07-2017

ಮಂಡ್ಯ: ಕಾವೇರಿ ನೀರು ಹಂಚಿಕೆ ವಿಚಾರ ಇನ್ನೆಷ್ಟು ವರ್ಷ ಇದೇ ರೀತಿ ಮುಂದುವರೆಯುತ್ತೇ, ಇದಕ್ಕೆ ಶಾಶ್ವತ ಪರಿಹಾರ ಇಲ್ಲವೇ ಎಂದು ಶಾಸಕ, ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಪ್ರಶ್ನಿಸಿದ್ದಾರೆ. ಕಾವೇರಿ ನದಿ ನೀರು ವಿಚಾರ, ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಹಿನ್ನೆಲೆಯಲ್ಲಿ, ಮಂಡ್ಯದಲ್ಲಿ ಮಾತನಾಡಿದ ಕೆ.ಎಸ್.ಪುಟ್ಟಣ್ಣಯ್ಯ, ಕರ್ನಾಟಕ, ತಮಿಳುನಾಡು ಸರ್ಕಾರ ಈ ಸಮಸ್ಯೆ ಬಗೆಹರಿಸೋದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳದಿದ್ದರೆ, ನೂರು ವರ್ಷವಾದ್ರೂ ಸಮಸ್ಯೆ ಬಗೆಹರಿಯಲ್ಲ ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಅಗ್ರಿಮೆಂಟ್ ಪ್ರಕಾರ ಕಳೆದ ೨೫ ವರ್ಷಗಳಿಂದ ೧೨೮೦ ಟಿಎಂಸಿ ಹೆಚ್ಚುವರಿ ನೀರನ್ನು ಹೊರಗೆ ಬಿಡಲಾಗಿದೆ. ಆ ನೀರನ್ನು ಸಂಗ್ರಹಿಸಿಕೊಳ್ಳಲಾಗದೇ ತಮಿಳುನಾಡು ಸರ್ಕಾರ ಬಂಗಾಳಕೊಲ್ಲಿಗೆ ೧೧೦೦ ಟಿಎಂಸಿ ಬಿಟ್ಟಿದ್ದಾರೆ. ಪರಿಸ್ಥಿತಿ ಹೀಗಿರುವಾಗ, ಕಾವೇರಿ ಹೋರಾಟದಲ್ಲಿ ೧ ಲಕ್ಷ ಕೋಟಿ ಆಸ್ತಿ ನಷ್ಟವಾಗಿದೆ. ಅದನ್ನು ಲೆಕ್ಕ ಹಾಕಿದರೆ ಪರಿಹಾರವನ್ನೇ ಕೊಡಬಹುದಿತ್ತು ಎಂದರು. ನ್ಯಾಯಾಲಯದಲ್ಲಿ ಚರ್ಚೆ ಆಗೋ ಬದಲು, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಮಹದಾಯಿ ಎರಡು ವರ್ಷವಾಯ್ತು. ಕುಡಿಯುವ ನೀರಿಗೆ ಒಂದು ನೀತಿ ಇಲ್ಲದಿದ್ದರೆ, ಪ್ರಜಾಪ್ರಭುತ್ವ ಯಾರಿಗಾಗಿ..? ಎಂದ ಅವರು, ಒಂದು ವೇಳೆ ಇಂದಿನ ತೀರ್ಪು ವ್ಯತಿರಿಕ್ತವಾಗಿ ಬಂದರೆ ಹೋರಾಟ ಅನಿವಾರ್ಯವಾಗಿದ್ದೂ, ರಾಜ್ಯ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು, ನಾಲೆಗೆ ನೀರು ಬಿಟ್ಟರೆ ಬೆಳೆ ಉಳಿಸಿಕೊಳ್ಳಬಹುದು, ಈ ನಿಟ್ಟಿನಲ್ಲಿ ಸರ್ಕಾರ ಯೋಚಿಸಬೇಕಿದೆ ಎಂದಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ