ಮಂಡ್ಯ-ಮೈಸೂರಿನಲ್ಲಿ ತೀವ್ರ ಕಟ್ಟೆಚ್ಚರ !

Kannada News

11-07-2017

ಮಂಡ್ಯ: ಇಂದಿನಿಂದ ಸುಪ್ರೀಂ‌ ಕೋರ್ಟ್‌ನಲ್ಲಿ ಕಾವೇರಿ ನೀರು ಹಂಚಿಕೆ ವಿಚಾರಣೆ ನಡೆಯಲಿದ್ದೂ, ಮುಂಜಾಗ್ರತಾ ಕ್ರಮವಾಗಿ ಮಂಡ್ಯ-ಮೈಸೂರಿನಲ್ಲಿ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ. ಸಾರ್ವಜನಿಕ, ಖಾಸಗಿ ಸ್ವತ್ತುಗಳು ನಾಶಪಡಿಸಿದರೆ ಕಾನೂನು ಕ್ರಮದ  ಜರುಗಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಕೆಆರ್‌ಎಸ್ ಅಣೆಕಟ್ಟು ಬಳಿಯೂ ತೀವ್ರ ಬಿಗಿಭದ್ರತೆ ಮಾಡಲಾಗಿದೆ. ಇನ್ನು ಮಂಡ್ಯದಲ್ಲಿ, 10 ಕೆಎಸ್‌ಆರ್‌ಪಿ ತುಕಡಿ, 25 ಡಿಎಆರ್ ತುಕಡಿ, 400 ಗೃಹರಕ್ಷಕ ದಳದ ಸಿಬ್ಬಂದಿ ಮತ್ತು 2 ಸಾವಿರ ಅಧಿಕಾರಿ & ಸಿಬ್ಬಂದಿ ಮತ್ತು 500 ಹೊರಜಿಲ್ಲೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಕೆಆರ್‌ಎಸ್ ಡ್ಯಾಂ ಬಳಿ ಬಿಗಿ ಭದ್ರತೆ ಕೈಗೊಂಡಿದ್ದು. 6 ಕೆಎಸ್‌ಆರ್‌ಪಿ & ಡಿಎಆರ್ ತುಕಡಿ.100 ಹೆಚ್ಚು ಪೊಲೀಸ್ ಸಿಬ್ಬಂದಿ. ಆಯಾ ಸ್ಥಳಗಳಲ್ಲಿ ಬ್ಯಾರಿಕೇಟ್ ವ್ಯವಸ್ಥೆ ಮಾಡಲಾಗಿದೆ. ಮಂಡ್ಯದಲ್ಲಿ ಪೊಲೀಸರ ಪೆರೇಡ್ ಮತ್ತು ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಪಥಸಂಚಲನ ನೆಡೆಸುತ್ತಿದ್ದಾರೆ .ಎಸ್ಪಿ ಜಿ.ರಾಧಿಕಾ, ಎಎಸ್ಪಿ ಲಾವಣ್ಯ ನೇತೃತ್ವದಲ್ಲಿ ಪೊಲೀಸ್ ಪೆರೇಡ್ ಮಾಡಲಾಗುತ್ತಿದೆ. ಒಟ್ಟಾರೆ ಇಂದು ಸುಪ್ರೀಂ ನಲ್ಲಿ ಕಾವೇರಿ ನದಿ ನೀರು ವಿಚಾರಣೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ