ಒಂದೇ ಮನೆಯ ಮೂವರ ಸಾವು !

Kannada News

11-07-2017

ಚಿತ್ರದುರ್ಗ: ನಿನ್ನೆ ತಾಯಿ ಮಗು ಮೃತಪಟ್ಟಿದ್ದ ಮನೆಯಲ್ಲಿ ಇಂದು ಮತ್ತೊಂದು ಸಾವು ಸಂಭವಿಸಿದೆ. ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ಖಂಡೇನಹಳ್ಳಿ ಪಾಳ್ಯದಲ್ಲಿ ಈ ಘಟನೆ ನಡೆದಿದೆ. ಮಡ್ನಪ್ಪ(65) ಹಾವು ಕಚ್ಚಿ‌ ಮೃತಪಟ್ಟ ವ್ಯಕ್ತಿ. ಕಳೆದ 24 ಗಂಟೆಯೊಳಗೆ ಒಂದೇ ಮನೆಯ 3 ಜನರ ಸಾವನ್ನಪ್ಪಿದ್ದಾರೆ. ನಿನ್ನೆ ಮುಂಜಾನೆ ಇದೇ ಮನೆಯಲ್ಲಿ 3 ವರ್ಷದ ಮಗು ಕೀರ್ತನಾ ಮೃತಪಟ್ಟಿದ್ದಳು. ಮಗಳ ಸಾವಿನ ಸುದ್ದಿ ಕೇಳುತ್ತಲೇ ತಾಯಿ ರಂಜಿತಾ ಕೂಡಾ ಮರಣ ಹೊಂದಿದ್ದರು. ಇಂದು ತಡರಾತ್ರಿ ರಂಜಿತಾ ಮಾವ ಮಡ್ನಪ್ಪ ಹಾವು ಕಚ್ಚಿ ಮೃತಪಟ್ಟಿದ್ದಾರೆ. ಮೂರು ಜನರಿಗೂ ಹಾವು ಕಚ್ಚಿಯೇ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದೂ, ಹಿರಿಯೂರು ತಾಲ್ಲೂಕಿನ ಹಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ