ವಿಶ್ವಹಿಂದೂ ಪರಿಷತ್ ಮುಖಂಡನಿಂದ ಸರ್ಕಾರಕ್ಕೆ ಎಚ್ಚರಿಕೆ !

Kannada News

10-07-2017

ದಕ್ಷಿಣ ಕನ್ನಡ: ಕಳೆದ ಕೆಲ ದಿನಗಳಿಂದ ದಕ್ಷಿಣ ಕನ್ನಡದಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದ್ದೂ, ಇಂದು ಸಹಜ ಸ್ಥತಿಗೆ ಮರಳಿದೆ. ಇನ್ನು  ಹಿಂದೂ ಮುಖಂಡರನ್ನು ಬಂಧಿಸಲು ಪೊಲೀಸ್ ಇಲಾಖೆ ಸಿದ್ಧತೆ ನಡೆಸಲಾಗುತ್ತಿದೆ ಎಂಬ ವಿಚಾರದ ಕುರಿತು, ಸರ್ಕಾರಕ್ಕೆ ಮಂಗಳೂರಿನಲ್ಲಿ ವಿಶ್ವಹಿಂದೂ ಪರಿಷತ್ ನ ದಕ್ಷಣ ಕನ್ನಡ ಜಿಲ್ಲಾಧ್ಯಕ್ಷ  ಜಗದೀಶ್ ಶೇಣವ ಎಚ್ಚರಿಕೆ ನೀಡಿದ್ದಾರೆ. ಹಿಂದೂ ಮುಖಂಡರ ಬಂಧನಕ್ಕೆ ಇಲಾಖೆ ಮುಂದಾಗಿರುವುದು ಖಂಡನೀಯ, ಶರತ್ ಶವಯಾತ್ರೆ ನಾವು ಆಯೋಜಿಸಿದ್ದಲ್ಲ, ಅದು ಹಿಂದೂ ಸಮಾಜದ ಕೆಲಸ ಎಂದ ಅವರು. ಹರೀಶ್ ಪೂಂಜಾ, ಸತ್ಯಜಿತ್, ಪ್ರದೀಪ್, ಶರಣ್, ಮುರಳಿಕೃಷ್ಣ ಮೇಲೆ ಕೇಸು ದಾಖಲಿಸಿದ್ದಾರೆ. ಆದರೆ ಶರಣ್ ಪಂಪ್ ವೆಲ್ ನಮ್ಮ ರಾಜ್ಯ ನಾಯಕರು, ಕೂಲಂಕಷವಾಗಿ ಪರಿಶೀಲನೆ ನಡೆಸದೇ ಹಿಂದೂ ಮುಖಂಡರನ್ನ ಬಂಧಿಸುವ ಕೆಲಸ ಮಾಡಬೇಡಿ, ಹಾಗೊಂದು ವೇಳೆ ಮಾಡಿ ಅಹಿತಕರ ಘಟನೆ ನಡೆದರೆ ಸರ್ಕಾರವೇ ಹೊಣೆ ಎಂದಿದ್ದಾರೆ. ಕಲ್ಲು ತೂರಾಟದ ಘಟನೆ ನಡೆಯುವಾಗ ನಮ್ಮ ನಾಯಕರು ಅಲ್ಲಿರಲಿಲ್ಲ. ಹೀಗಾಗಿ ಸಂಘಪರಿವಾರದ ನಾಯಕರನ್ನು ಬಂಧಿಸಿದರೆ ಆಗುವ ಅನಾಹುತಗಳಿಗೆ ಸರ್ಕಾರ ಹೊಣೆ ಎಂದಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ