ಅಲ್ಪಾವದಿ ಬೆಳೆಗಳಿಗೆ ಜಿಲ್ಲಾಧಿಕಾರಿ ಸಲಹೆ !

Kannada News

10-07-2017

ಮೈಸೂರು: ಕಾವೇರಿ ಕೊಳ್ಳದ ಪ್ರಮುಖ ಜಿಲ್ಲೆಯಾಗಿರುವ ಮೈಸೂರಿನಲ್ಲಿ, ಈ ಬಾರಿಯೂ ಮಳೆಯ ಕೊರತೆ ಎದುರಾಗಿದೆ. ಇದರಿಂದ ರೈತರು ದೀರ್ಘಾವಧಿ ಬೆಳೆಗಳ ಬದಲು ಅಲ್ಪಾವಧಿ ಬೆಳೆಗಳನ್ನು ಬಿತ್ತನೆ ಮಾಡಬೇಕು ಎಂದು ಮೈಸೂರು ಜಿಲ್ಲಾಧಿಕಾರಿ, ಡಿ.ರಂದೀಪ್ ಜಿಲ್ಲೆಯ ರೈತರಿಗೆ ಸಲಹೆ ನೀಡಿದ್ದಾರೆ. ಕಳೆದ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಮಳೆಯ ಕೊರತೆಯಾಗಿಲ್ಲ. ಆದರೆ ಜೂನ್ ನಲ್ಲಿ ಶೇಕಡ 48% ಮಳೆಯ ಕೊರತೆಯಾಗಿದೆ. ಜುಲೈ 8 ರವರೆಗೆ ಕೇವಲ 8 ಎಂ.ಎಂ ಮಳೆಯಾಗಿದ್ದು, ಶೇಕಡ 54% ಮಳೆ ಕೊರತೆಯಾಗಿದೆ. ಇದುವರೆಗೂ 4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿತ್ತು. ಆದರೆ ಮಳೆ ಕೊರತೆಯ ಪರಿಣಾಮ ಕೇವಲ 2 ಲಕ್ಷ 28 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ. ಮಳೆ ಆಶ್ರಿತ ಪ್ರದೇಶದಲ್ಲಿ ಶೇಕಡ 79% ಪ್ರದೇಶದಲ್ಲಿ ಬಿತ್ತನೆಯಾಗಿದೆ. ನೀರಾವರಿ ಪ್ರದೇಶದಲ್ಲಿ ಶೇಕಡ 3% ಬಿತ್ತನೆಯಾಗಿದೆ ಎಂದು ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ನೀಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ