ಕಳ್ಳಬಟ್ಟಿ ಸೇವಿಸಿ 22 ಮಂದಿ ಸಾವು !

Kannada News

10-07-2017

ಉತ್ತರಪ್ರದೇಶದ ವಾರಣಾಸಿಯಲ್ಲಿ ಶುಕ್ರವಾರ ಸಂಭವಿಸಿದ ಕಳ್ಳಭಟ್ಟಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 22ಕ್ಕೇರಿದೆ. ಆದರೆ, ಕಳ್ಳಭಟ್ಟಿ ಸೇವಿಸಿ ಸಾವಿಗೀಡಾದವರ ಸಂಖ್ಯೆ 16 ಎಂದು ಅಜಂಗಢ ಸ್ಥಳೀಯಾಡಳಿತ ಹೇಳಿದೆ. ಸಾವಿನ ಸಂಖ್ಯೆ ಬಗ್ಗೆ ಗೊಂದಲಗಳಿದ್ದು, ಪರಿಶೀಲನೆ ನಡೆಯುತ್ತಿದೆ. ಅಜಂಗಢ ಪೊಲೀಸರು ಶನಿವಾರ ತಡರಾತ್ರಿ ಕಳ್ಳಭಟ್ಟಿ ತಯಾರಿಕೆ ಮತ್ತು ಮಾರಾಟ ಸ್ಥಳಗಳ ಮೇಲೆ ದಾಳಿ ನಡೆಸಿ, ಒಂಭತ್ತು ಮಂದಿಯನ್ನು ಬಂಧಿಸಿದ್ದಾರೆ. ಕಳ್ಳಭಟ್ಟಿ ಸೇವಿಸಿದ ಪರಿಣಾಮ ಅಜಂಗಢ ಜಿಲ್ಲೆಯ ರೌನಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕೇವತಾಹಿಯಾ ಮತ್ತು ಸಮೀಪದ ಗ್ರಾಮಗಳಲ್ಲಿನ 9 ಮಂದಿ ಶುಕ್ರವಾರ ರಾತ್ರಿ ಮೃತಪಟ್ಟಿದ್ದರು. ಅದೇ ದಿನ ಮಧ್ಯರಾತ್ರಿ ಇನ್ನೂ ಮೂವರು ಸಾವಿಗೀಡಾಗಿದ್ದರು. ಶನಿವಾರ ಮತ್ತೆ ಆರು ಮಂದಿ ಅಸುನೀಗಿದರು. ತೀವ್ರ ಅಸ್ವಸ್ಥತೆ ಹಿನ್ನೆಲೆಯಲ್ಲಿ ಶನಿವಾರ ಎಸ್‍ಎಎಸ್‍ಎಲ್ ಆಸ್ಪತ್ರೆಗೆ ದಾಖಲಾಗಿದ್ದ ಬದ್ರಿ ರಾಜ್‍ಭಾರ್ (55) ನಿನ್ನೆ ಕೊನೆಯುಸಿರೆಳೆದಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿರುವ ನಾಲ್ವರನ್ನು ವಾರಾಣಾಸಿಯ ಬನಾರಸ್ ಹಿಂದು ವಿ.ವಿ. ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳ್ಳಬಟ್ಟಿ ಸಾರಾಯಿ ನಿಷೇಧವಿದ್ದರೂ ಇನ್ನೂ ಅನೇಕ ಕಡೆಗಳಲ್ಲಿ ಈ ರೀತಿಯ ಪ್ರಕರಣಗಳು ಕಂಡುಬರುತ್ತಿವೆ.ಇದರಿಂದ ಹಲವಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.  

 


ಸಂಬಂಧಿತ ಟ್ಯಾಗ್ಗಳು

ಕಳ್ಳಬಟ್ಟಿ ಸೇವಿಸಿ 22 ಮಂದಿ ಸಾವು !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ