ಪ್ರಿಯತಮೆ ಶವವನ್ನು ಬೈಕ್ ನಲ್ಲಿ ಠಾಣೆಗೆ ತಂದ ಪ್ರಿಯಕರ !

Kannada News

10-07-2017

ಬಳ್ಳಾರಿ: ಪ್ರೀತಿಸಿದ ಯುವತಿ ಆತ್ಮ ಹತ್ಯೆ ಮಾಡಿಕೊಂಡಾಗ ಆಕೆಯ ಶವವನ್ನು ಪ್ರಿಯಕರ  ಬೆನ್ನಿಗೆ ಕಟ್ಟಿಕೊಂಡು ಬೈಕ್ ನಲ್ಲಿ ಠಾಣೆಗೆ ತಂದ ಘಟನೆ, ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಸಿರಿಗೆರೆಯಲ್ಲಿ ನಿನ್ನೆ ನಡೆದಿದೆ. ಸಿರಿಗೆರೆಯ ಹುಚ್ಚೇಶ್ವರ ನಗರದ ಹನುಮಂತಮ್ಮ (19) ಮತ್ತು ಜನತಾ ಕಾಲೋನಿಯ ದಾವುಲ್ ಸಾಬ್ ಕಳೆದ ಎರೆಡು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇದು ಊರಿನವರಿಗೂ ಗೊತ್ತಿತ್ತು. ಇವರಿಬ್ಬರು ಪರಸ್ಪರ ಒಪ್ಪಿ ವಿವಾಹವಾಗಲು ನಿರ್ಧರಿಸಿದ್ದರು. ಆದರೆ ದಾವಲ್ ಸಾಬ್ ನ ಪೋಷಕರು ಇದನ್ನು ಒಪ್ಪದೆ ಮಗನ ಮನವೊಲಿಸಿ ಬೇರೆ ವಿವಾಹ ಮಾಡಲು ಮುಂದಾಗಿದ್ದರು. ಇದರಿಂದ ಕುಪಿತಗೊಂಡಿದ್ದ ಹನುಮಂತಮ್ಮಳನ್ನು ಸಮಾಧಾನಪಡಿಸಲು, ದಾವಲ್ ಸಾಬ್ ಗ್ರಾಮದಿಂದ ನಡವಿ ಗ್ರಾಮದ ಹತ್ತಿರದ ಮಟ್ಟಿ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದ. ಈ ಸಂದರ್ಭದಲ್ಲಿ ದಾವಲ್ ಸಾಬ್ ತನ್ನ ಮೊಬೈಲ್ ಹನುಮಂತಮ್ಮಳಿಗೆ ನೀಡಲು ನಿರಾಕರಿಸಿದ್ದರಿಂದ, ಆಕೆ ಅನತಿ ದೂರಕ್ಕೆ ತೆರಳಿ ತನ್ನ ದುಪ್ಪಟ್ಟದಿಂದ ಮರಕ್ಕೆ ನೇಣು ಹಾಕಿಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದಾಳೆಂದು ತಿಳಿದು ಬಂದಿದೆ. ಅಲ್ಲಿಂದ ಹನುಮಂತಮ್ಮಳ ಶವವನ್ನು ತನ್ನ ಬೈಕ್ ನಲ್ಲಿ ಕೂರಿಸಿಕೊಂಡು ದುಪ್ಪಟ್ಟದಿಂದ ತನ್ನ ಬೆನ್ನಿಗೆ ಕಟ್ಟಿಕೊಂಡು ನೇರವಾಗಿ ಆತ ಠಾಣೆಗೆ ಬಂದಿದ್ದಾನೆ. ದಾವಲ್ ಸಾಬ್ ಪೊಲೀಸರಿಗೆ ಈ ಬಗ್ಗೆ  ಹೇಳಿಕೆ ನೀಡಿದ್ದೂ, ಶವ ಪರೀಕ್ಷೆ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ