ಚೀನಾ ಫೋನ್ ಗಳನ್ನು ರಸ್ತೆಗೆಸೆದು ಪ್ರತಿಭಟನೆ !

Kannada News

10-07-2017

ಮೈಸೂರು: ಸಿಕ್ಕಿಂ ಗಡಿಯಲ್ಲಿ ಭಾರತದ ವಿರುದ್ಧ ಕ್ಯಾತೆ ತೆಗೆದಿರುವ ಚೀನಾ ದೇಶದ ಧಮನಕಾರಿ ನೀತಿ ಖಂಡಿಸಿ ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಮೈಸೂರು ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದ ಪ್ರಭಾ ಚಿತ್ರಮಂದಿರದ ಬಳಿ ಪ್ರತಿಭಟನೆ ನಡೆಸಿದರು. ಭಾರತ-ಚೀನಾ ಗಡಿಯಲ್ಲಿ ಅನಗತ್ಯವಾಗಿ ಖ್ಯಾತೆ ತೆಗೆಯುತ್ತಿರುವ ಚೀನಾ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು. ಚೀನಾ ಮೊಬೈಲ್ ಫೋನ್ ಗಳನ್ನು ರಸ್ತೆಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಚೀನಾ ದೇಶದ ಉತ್ಪನ್ನಗಳನ್ನು ಬಳಕೆ ಮಾಡಬಾರದು, ಚೀನಾ ದೇಶದ ವಸ್ತುಗಳನ್ನು ಮಾರಾಟ ಮಾಡಬಾರದೆಂದು, ಅವುಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.  ಮತ್ತು ಚೀನಾ ಉತ್ಪನ್ನಗಳನ್ನು ಕೊಳ್ಳದಂತೆ ಸಾರ್ವಜನಿಕರಲ್ಲಿ ಪ್ರತಿಭಟನಾಕಾರರು ಜಾಗೃತಿ ಮೂಡಿಸುತ್ತಿದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ