ರೌಡಿ ರಂಜಿತ್ ಹತ್ಯೆ: ಮೂರನೇ ಆರೋಪಿ ಬಂಧನ !

Kannada News

10-07-2017

ಬೆಂಗಳೂರು: ಬೆಂಗಳೂರಿನಲ್ಲಿ ರೌಡಿಶೀಟರ್ ರಂಜಿತ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೂವ೯ ವಿಭಾಗ ಡಿಸಿಪಿ ಅಜಯ್ ಹಿಲೋರಿ ನೇತೃತ್ವದ ಸ್ವ್ಯಾಡ್ ಟೀಂ ಕಾಯ೯ಚರಣೆ ನಡೆಸಿ ಮತ್ತೋವ೯ ಪ್ರಮುಖ ಆರೋಪಿಯಾದ ಪ್ರಮೋದ್(೩೦) ನನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೂವರು ಆರೋಪಿಗಳು ಬಂಧಿಯಾಗಿದ್ದಾರೆ. ಜುಲೈ ೫ ರ ತಡರಾತ್ರಿ ೧೨.೩೦ರ ವೇಳೆ, ಫ್ರೇಜರ್ ಟೌನ್ ಬಳಿಯ ಗೋಶಾಲೆಯಲ್ಲಿ ಈ ಘಟನೆ ನಡೆದಿತ್ತು. ಫ್ರೇಜರ್ ಟೌನ್ ರೌಡಿಶೀಟರ್ ಆಗಿದ್ದ ರಂಜಿತ್ ನನ್ನು ಮಾರಕಾಸ್ತ್ರದೊಂದಿಗೆ ಅಟ್ಯಾಕ್ ಮಾಡಿದ್ದ ನಾಲ್ವರ ತಂಡ, ಮನಬಂದಂತೆ ಕೊಚ್ಚಿ ಕೊಲೆ ಮಾಡಿದ್ದರು. ಘಟನೆ ನಂತರ ಕೆ.ಜಿ.ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಆರೋಪಿಗಳ ಕಾಲಿಗೆ ಪೈರಿಂಗ್ ನಡೆಸಿ ಬಂಧಿಲಾಗಿತ್ತು. ಇದೀಗ ಮೂರನೇ ಆರೋಪಿಯನ್ನು ಬಂಧಿಸಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ