ಹೆದ್ದಾರಿಯಲ್ಲೂ ಪಾಲಿಸಬೇಕು ಟ್ರಾಫಿಕ್ ರೂಲ್ಸ್ !

Kannada News

08-07-2017

ಬೆಂಗಳೂರು: ರಾಜ್ಯದ ಹೆದ್ದಾರಿಗಳಲ್ಲಿ ಸಂಚರಿಸುವಾಗಲೂ ಸಂಚಾರ ನಿಯಮಗಳನ್ನು ಪಾಲಿಸಬೇಕು ಇಲ್ಲದಿದ್ದರೆ ಗಸ್ತು ತಿರುವ ಪೊಲೀಸರು ದಂಡ ವಿಧಿಸಲಿದ್ದಾರೆ. ಅಂತಹ ಅವಕಾಶ ಹೆದ್ದಾರಿಗಳಲ್ಲಿ ಗಸ್ತು ತಿರುಗುವ ಪೊಲೀಸರಿಗೆ ನೀಡಲಾಗಿದೆ. ಇದುವರೆಗೂ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಹಾಗೂ ಚಾಲಕರ ವಿರುದ್ಧ ಕೇಸ್ ದಾಖಲಿಸುವ ಅಧಿಕಾರ ಸಂಚಾರ ಪೊಲೀಸರಿಗೆ ಮಾತ್ರ ನೀಡಲಾಗಿತ್ತು. ಅದರಲ್ಲೂ ಈ ಸಂಚಾರಿ ಪೊಲೀಸರು ಕಮಿಷನರೇಟ್ ಹಾಗೂ ನಗರದ ಪ್ರದೇಶದಲ್ಲಿ ಮಾತ್ರ ದಂಡ ವಿಧಿಸುತ್ತಿದ್ದರು. ಆದರೆ ಇದೀಗ ಅಪಘಾತ ತಪ್ಪಿಸುವ ನಿಟ್ಟಿನಲ್ಲಿ ಹೆದ್ದಾರಿಯ ಗಸ್ತು ವಾಹನಗಳಲ್ಲಿ ಕರ್ತವ್ಯ ನಿರ್ವಹಿಸುವ ಎಎಸ್‍ಐಗಳಿಗೆ ಸಂಚಾರ ನಿಯಮ ಉಲ್ಲಂಘಿಸುವ ಸವಾರರಿಗೆ ದಂಡ ವಿಧಿಸುವ ಅಧಿಕಾರ ನೀಡಲಾಗಿದೆ. ಇದರಿಂದ ಮದ್ಯ ಸೇವಿಸಿ ವಾಹನ ಚಲಾಯಿಸುವ ಸವಾರರು ಹಾಗೂ ವೇಗ ಹಾಗೂ ನಿರ್ಲಕ್ಷ್ಯತನದಿಂದ ವಾಹನ ಚಲಾಯಿಸುವ ಚಾಲಕರಿಗೆ ಕಡಿವಾಣ ಬೀಳಲಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್.ಕೆ.ದತ್ತ ಗಸ್ತು ಪೊಲೀಸರಿಗೂ ದಂಡ ವಿಧಿಸುವ ಅವಕಾಶ ಕಲ್ಪಿಸಿ, ಆದೇಶ ಹೊರಡಿಸಿದ್ದಾರೆ. ಒಟ್ಟಿನಲ್ಲಿ ಹೆದ್ದಾರಿಗಳ ಸುರಕ್ಷತೆಗೆ ಪೊಲೀಸ್ ಇಲಾಖೆಯೂ ಸನ್ನದ್ಧವಾಗಿದ್ದು, ಅಪಘಾತಗಳನ್ನು ತಡೆಯಲು ಮುಂದಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ