ಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ ಆತ್ಮಹತ್ಯೆ !

Kannada News

08-07-2017 392

ಬೆಂಗಳೂರು: ವೈಟ್‍ಫೀಲ್ಡ್‍ನ ಅಂಬೇಡ್ಕರ್ ನಗರದಲ್ಲಿ ಎಸ್‍.ಎಸ್.ಎಲ್.ಸಿ ಪೂರಕ ಪರೀಕ್ಷೆಯಲ್ಲೂ ಫೇಲಾಗಿದ್ದಕ್ಕೆ ನೊಂದ ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾಗಿರುವ ದುರ್ಘಟನೆ ಶುಕ್ರವಾರ ಸಂಜೆ  ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಅಂಬೇಡ್ಕರ್ ನಗರದ 6ನೇ ಕ್ರಾಸ್‍ನ ಮಂಜುನಾಥ ರತ್ನಮ್ಮ ದಂಪತಿಯ ಪುತ್ರಿ ರಶ್ಮಿ (16) ಎಂದು ಗುರುತಿಸಲಾಗಿದೆ. ವರ್ತೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿದ್ದ ರಶ್ಮಿ ಎಸ್‍.ಎಸ್.ಎಲ್.ಸಿ ಪರೀಕ್ಷೆ ಹಾಗೂ ಪೂರಕ ಪರೀಕ್ಷೆಯಲ್ಲೂ ಫೇಲಾಗಿದ್ದಳು. ಇದರಿಂದ ನೊಂದಿದ್ದ ಆಕೆ, ತಂದೆ-ತಾಯಿ ಇಬ್ಬರೂ ಸೆಕ್ಯೂರಿಟಿ ಕೆಲಸಕ್ಕೆ ಹೋಗುವುದನ್ನು, ಸಹೋದರಿಯರಿಬ್ಬರು ಶಾಲೆಗೆ ಹೋಗುವುದನ್ನು, ಕಾಯ್ದುಕೊಂಡು ಎಲ್ಲರೂ ಹೋದ ನಂತರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ವೈಟ್‍ಫೀಲ್ಡ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ