ಖಿನ್ನತೆಗೆ ಬಲಿಯಾದ ತಾಯಿ-ಮಗು !

Kannada News

08-07-2017

ಬೆಂಗಳೂರು: ಕೆಂಪೇಗೌಡ ನಗರದ ದತ್ತಾತ್ರೇಯನಗರದ ಗೃಹಿಣಿ ಮಂಗಳ ತನ್ನ ಐದು ವರ್ಷದ ಮಗಳು, ಸನ್ನಿಧಿಯನ್ನು ನೇಣುಬಿಗಿದು ಕೊಲೆಮಾಡಿ ತಾನೂ ನೇಣಿಗೆ ಶರಣಾಗಿರುವುದು ಮಾನಸಿಕ ಖಿನ್ನತೆಯಿಂದಲೇ ನಡೆದಿರುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ. ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ ಶಂಕರ್ ಅವರನ್ನು ವಿವಾಹವಾಗಿದ್ದ ಮಂಗಳ ಖಿನ್ನತೆಯಿಂದ ಬಳಲುತ್ತಿದ್ದರು, ಅದರಿಂದಾಗಿ ಅತ್ತೆ ಮಾವ ಶಂಕರ್ ದಂಪತಿಯನ್ನು ಬೇರೆ ಮಾಡಿದ್ದರು. ಸಮೀರಪುರದ ದತ್ತಾತ್ರೇಯ ನಗರದಲ್ಲಿ ವಾಸಿಸುತ್ತಿದ್ದ ಮಂಗಳ ಆವರ ಮಾನಸಿಕ ಖಿನ್ನತೆಗೆ ಚಿಕಿತ್ಸೆ ಕೊಡಿಸುತ್ತಿರುವುದ ತನಿಖೆಯಲ್ಲಿ ಕಂಡುಬಂದಿದೆ. ಖಿನ್ನತೆಯಿಂದಾಗಿ ಆಕೆ ನಿನ್ನೆ ಬೆಳಿಗ್ಗೆ ಶಂಕರ್ ಕೆಲಸಕ್ಕೆ ಹೋದ ನಂತರ ಸನ್ನಿಧಿಯನ್ನು ನೇಣಿಗೇರಿಸಿ, ಬಳಿಕ ಗೃಹಿಣಿ ಮಂಗಳ ಪಕ್ಕದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ಶಂಕರ್ ಕೆಲಸ ಮುಗಿಸಿ ಸಂಜೆ ಮನೆಗೆ ಬಂದು ಎಷ್ಟು ಬಾಗಿಲು ಬಡಿದರೂ ತೆಗೆಯದಿದ್ದರಿಂದ ಆತಂಕಗೊಂಡು ಕಿಟಕಿಯಲ್ಲಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಮಂಗಳ ಆವರು ಕೈಮೇಲೆ ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದುಕೊಂಡಿದ್ದಾರೆ, ಅವರ ಕೃತ್ಯಕ್ಕೆ ಶಂಕರ್ ಗೆ ಬೇರೊಬ್ಬ ಮಹಿಳೆ ಜೊತೆ ಅಕ್ರಮ ಸಂಬಂಧವಿತ್ತು ಎನ್ನುವುದನ್ನು ಪೊಲೀಸರು ನಿರಾಕರಿಸಿದ್ದಾರೆ. ಪತಿಯ ವಿಚಾರಣೆಯಲ್ಲಿ ಆತನ ಪಾತ್ರವಿಲ್ಲದಿರುವುದು ಕಂಡುಬಂದಿದೆ ಎಂದು ಪ್ರಕರಣದ ತನಿಖೆ ನಡೆಸಿದ ಕೆ.ಜಿ ನಗರ ಪೊಲೀಸರು ತಿಳಿಸಿದ್ದಾರೆ.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ