ಲಾರಿ ಡಿಕ್ಕಿ- ಹಾಲಿನ ವ್ಯಾಪಾರಿ ಸಾವು !

Kannada News

08-07-2017

ಬೆಂಗಳೂರು: ದೇವನಹಳ್ಳಿಯ ದೊಡ್ಡಬಳ್ಳಾಪುರ ರಸ್ತೆಯಲ್ಲಿ ಶನಿವಾರ ಬೆಳಿಗ್ಗೆ ವೇಗವಾಗಿ ಬಂದ ಲಾರಿ ರಸ್ತೆ ತಿರುವು ತೆಗೆದುಕೊಳ್ಳುತ್ತಿದ್ದ ಟಿವಿಎಸ್ ಎಕ್ಸೆಲ್ ಸ್ಕೂಟರ್‍ ಗೆ ಡಿಕ್ಕಿ ಹೊಡೆದು ಹಾಲಿನ ವ್ಯಾಪಾರಿ ಮಂಜುನಾಥ್ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ದೇವನಹಳ್ಳಿಯ ಪರ್ವತಪುರ ನಿವಾಸಿ ಮಂಜುನಾಥ್(30) ಪ್ರತಿನಿತ್ಯ ಮನೆ ಮನೆಗೆ ಹಾಲನ್ನು ಸರಬರಾಜು ಮಾಡುತ್ತಿದ್ದರು. ಮಂಜುನಾಥ್ ಅವರು ಎಂದಿನಂತೆ ಬೆಳಗ್ಗೆಯೂ ದೇವನಹಳ್ಳಿ ಪಟ್ಟಣದ ದೊಡ್ಡಬಳ್ಳಾಪುರ ರಸ್ತೆಯಲ್ಲಿ ಹಾಲು ಸರಬರಾಜು ಮಾಡಿ ಟಿವಿಎಸ್ ಎಕ್ಸೆಲ್ ಸ್ಕೂಟರ್‍ ನಲ್ಲಿ ರಸ್ತೆ ತಿರುವು ತೆಗೆದುಕೊಳ್ಳುತ್ತಿದ್ದಾಗ ಅತಿವೇಗದಿಂದ ಬಂದಂತಹ ಗ್ಯಾಸ್ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮಂಜುನಾಥ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ದೇವನಹಳ್ಳಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ಲಾರಿ ಚಾಲಕನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ