ಪೂಜೆಗೆ ಬಳಸಿದ್ದ ದೀಪದಿಂದ ಮನೆಗೆ ಬೆಂಕಿ !

Kannada News

08-07-2017

ಬೆಂಗಳೂರು: ನಗರದ ಹೊರವಲಯದ ತುಮಕೂರು ರಸ್ತೆಯ ಮಾದವಾರ ಬಳಿ ಶುಕ್ರವಾರ ಮಧ್ಯರಾತ್ರಿ ತೋಟದ ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಮನೆಯಲ್ಲಿದ್ದ ಅಪಾರ ಪ್ರಮಾಣದ ಗೃಹ ವಸ್ತುಗಳು ಸುಟ್ಟು ಹೋಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಾದವಾರದ ಬಳಿಯ ತೋಟದ ಮನೆಯಲ್ಲಿ ರಾತ್ರಿ ಬೆಂಕಿ ಹೊತ್ತಿಕೊಂಡಿದ್ದು ಸುದ್ದಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳದ ಎರಡು ವಾಹನಗಳು ಧಾವಿಸಿ  ಬೆಂಕಿ ನಂದಿಸಿದ್ದು ಅಷ್ಟರೊಳಗೆ ಮನೆಯಲ್ಲಿನ ವಸ್ತುಗಳೆಲ್ಲಾ ಸುಟ್ಟು ಹೋಗಿವೆ. ಮನೆಯಲ್ಲಿ ಯಾರೂ ಇಲ್ಲದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.  ನಿನ್ನೆ ಶುಕ್ರವಾರ ವಾಗಿದ್ದರಿಂದ ಮಾಲೀಕ ಪರಮಾನಂದ ಅವರು ಕುಟುಂಬ ಸಮೇತ ಮನೆಯಲ್ಲಿ ಪೂಜೆ ಮಾಡಿ ಹೋಗಿದ್ದರು. ಪೂಜೆಗೆ ಬಳಸಿದ್ದ ದೀಪದಿಂದ ಆಕಸ್ಮಿಕವಾಗಿ ಅಗ್ನಿ ಸಂಭವಿಸಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ