ವಿಷ ಸೇವಿಸಿ ಪ್ರಾಣ ಬಿಟ್ಟ ರೈತ ಮಹಿಳೆ !

Kannada News

08-07-2017

ಮೈಸೂರು: ಸಾಲಬಾಧೆ ತಾಳಲಾರದೇ ವಿಷ ಸೇವಿಸಿ ಅಸ್ವಸ್ತಳಾಗಿದ್ದ ರೈತ ಮಹಿಳೆ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ನಿಂಗಮ್ಮ(೬೩) ಮೃತ ರೈತ ಮಹಿಳೆ. ನಿಂಗಮ್ಮ ಎಚ್.ಡಿ.ಕೋಟೆ ತಾಲ್ಲೂಕಿನ ಕಾರಪುರ ಗ್ರಾಮದ ನಿವಾಸಿ. ಮಹಿಳಾ ಸ್ವಸಹಾಯ ಸಂಘದಲ್ಲಿ  60 ಸಾವಿರ, ಕಾವೇರಿ ಗ್ರಾಮೀಣ ಬ್ಯಾಂಕಿನಲ್ಲಿ 16 ಸಾವಿರ, ವಿ.ಎಸ್.ಎಸ್.ಎನ್ ಅಂತರಸಂತೆ ಬ್ಯಾಂಕ್ ನಲ್ಲಿ 70 ಸಾವಿರ ಸಾಲ ಮಾಡಿದ್ದ ನಿಂಗಮ್ಮ, ಸಾಲ ತೀರಿಸಲು ಸಾಧ್ಯವಾಗದ ಕಾರಣ ಜಮೀನಿನಲ್ಲಿ ವಿಷ ಸೇವಿಸಿದ್ದರು. ಇದನ್ನು ಗಮನಿಸಿದ ಅಕ್ಕಪಕ್ಕದ ಜಮೀನಿನವರು, ಒದ್ದಾಡುತ್ತಿದ್ದ ನಿಂಗಮ್ಮ ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಬೀಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ