ಮಹಿಳಾ ಹಾಸ್ಟೆಲ್ ನಲ್ಲಿ ಸೆರೆ ಸಿಕ್ಕ ಕಳ್ಳ !

Kannada News

08-07-2017

ಬೆಂಗಳೂರು: ಮಹಿಳೆಯರ ಹಾಸ್ಟೆಲ್ ನಲ್ಲಿ ಬ್ಯಾಗ್ ಕದಿಯುತ್ತಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ. ಹಾಸ್ಟೆಲ್ ನಲ್ಲಿ ಯುವತಿಯರ ಬ್ಯಾಗ್, ಪರ್ಸ್ ಕದಿಯುತ್ತಿದ್ದ ಪವನ್ ಸಿಂಗ್ ಎಂಬುವನು ಬಂಧಿತ ಆರೋಪಿ. ಕಳ್ಳತನಕ್ಕೂ ಮುನ್ನ ಮಹಿಳಾ ಶೌಚಾಲಯಕ್ಕೆ ತೆರಳಿದ್ದ ಈತ, ಹಾಸ್ಟೆಲ್ ನಲ್ಲಿದ್ದ ಶೌಚಾಲಯದಲ್ಲೆಲ್ಲಾ ಓಡಾಡಿ ನಂತರ ಕಳ್ಳತನಕ್ಕೆ ಕೈಹಾಕಿದ್ದಾನೆ. ಬನಶಂಕರಿ ವಸುಧಾ ವಸತಿ ಗೃಹದಲ್ಲಿ ಕಳ್ಳತನಕ್ಕೆ ಹೋಗಿದ್ದಾಗ, ಈ ವೇಳೆ ವಸತಿಗೃಹದ ಮಹಿಳೆಯರೇ ಆರೋಪಿಯನ್ನು ಸೆರೆ ಹಿಡಿದಿದ್ದಾರೆ. ಸ್ಥಳಕ್ಕೆ ಪೊಲೀಸರನ್ನ ಕರೆಸಿದ ಮಹಿಳೆಯರು ಆರೋಪಿಯನ್ನು ಒಪ್ಪಿಸಿದ್ದಾರೆ. ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದೂ, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ