ಭಾರತ-ಪಾಕ್ ಗಡಿಯಲ್ಲಿ ಕಟ್ಟೆಚ್ಚರ !

Kannada News

08-07-2017

ಶ್ರೀನಗರ: ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದೂ, ಇಂದೂ ಕೂಡ ಗಡಿಯಲ್ಲಿ ಪ್ರಚೋದಿತ ದಾಳಿ ನಡೆಸಿದೆ. ದಾಳಿಯಲ್ಲಿ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ. ಹಾಗೂ ಮೂವರಿಗೆ ಗಂಭೀರ ಗಾಯಗಳಾಗಿವೆ. ಬೆಳಗಿನ ಜಾವ 6.30 ರ ಸುಮಾರಿಗೆ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣಾ ರೇಖೆ ಬಳಿ ಪ್ರಚೋದಿದ ದಾಳಿ ಆರಂಭಿಸಿದ್ದಾರೆ. ದಾಳಿಯಿಂದ ಇಬ್ಬರು ನಾಗರಿಕರಿಗೆ ಗುಂಡು ತಗುಲಿ ಸಾವನ್ನಪ್ಪಿದ್ದಾರೆ. ಪಾಕಿಸ್ತಾನಿ ದಾಳಿಗೆ ಭಾರತೀಯ ಸೈನಿಕರು ತಕ್ಕ ಪ್ರತಿದಾಳಿ ನಡೆಸಿದ್ದಾರೆ. ಇನ್ನೊಂದೆಡೆ ಗಡಿಯಲ್ಲಿನ ಬಂಡಿಪೋರಾ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಮೂವರು ಭಾರತೀಯ ಸೈನಿಕರಿಗೆ ದಾಳಿಯಿಂದ ಗಾಯಗಳಾಗಿವೆ. ಕಳೆದ ತಿಂಗಳಲ್ಲಿಯೇ ಪಾಕಿಸ್ತಾನ 23 ಬಾರಿ ಕದನ ವಿರಾಮ ಉಲ್ಲಂಘಿಸಿದ್ದೂ 12 ಮಂದಿ ಭಾರತೀಯ ಸೈನಿಕರಿಗೆ ಗಾಯಗಳಾಗಿವೆ. ದಾಳಿಯಿಂದ ಗಡಿ ನಿಯಂತ್ರಣ ರೇಖೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.   ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ