ನೀರಿನ ಕೊಡ ತಿರುಗಿದರೇ ಮಳೆಯಾಗುತ್ತಂತೇ..?

Kannada News

08-07-2017 283

ಕೊಪ್ಪಳ: ರಾಜ್ಯದಲ್ಲಿ  ಮಳೆ ವೈಫಲ್ಯ ಹಿನ್ನೆಲೆಯಲ್ಲಿ, ಮಳೆಗಾಗಿ ಕೊಪ್ಪಳದ ಬಾಲಕಿಯರಿಂದ ಪೂಜೆ ಸಲ್ಲಿಸಲಾಯಿತು. ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಮಳೆ ಬರುತ್ತದೆಯೇ ಎಂದು ಕಾರಣಿಕ ಕೆಳುತ್ತಿದ್ದರು. ಜಿಲ್ಲೆಯ ಭಾಗ್ಯನಗರದ ಮರಿಯಮ್ಮ ದೇವಿ ಗುಡಿಯ ಮುಂದೆ ಬಾಲಕಿಯರು ಮತ್ತು ಗ್ರಾಮಸ್ಥರೂ ಸೇರಿ ಪೂಜೆ ಸಲ್ಲಿಸಿದರು. ತುಂಬಿದ ಕೊಡಕ್ಕೆ ಪೂಜೆ ಸಲ್ಲಿಸಿದ ಬಳಿಕ, ನೀರಿನ ಕೊಡ ತಿರುಗಿದರೆ ಮಳೆಯಾಗುತ್ತೆ ಎಂಬ ನಂಬಿಕೆ ಇಲ್ಲಿನದಾಗಿದ್ದೂ ಈ ರೀತಿ ಪೂಜೆ ನೆರವೇರಿಸಲಾಗುತ್ತಿತ್ತು. ಬಾಲಕಿಯರು ಕೇಳಿದ ಕಾರಣಿಕದಲ್ಲಿ ಕೊಡ ತಿರುಗಿದ್ದು ಮಳೆಯಾಗುತ್ತದೆ ಎಂಬ ನಂಬಿಕೆ ಉಂಟಾಗಿದೆ, ಆದರೆ ಈ ನಂಬಿಕೆ ಎಷ್ಟರ ಮಟ್ಟಿಗೆ ನಿಜವಾಗುತ್ತದೋ ಕಾದು ನೋಡಬೇಕು.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ