ನಕಲಿ ದಾಖಲೆ: ಲಕ್ಷಾಂತರ ವಂಚನೆ !

Kannada News

07-07-2017

ಬೆಂಗಳೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಸಲಿ ಎಂದು ನಂಬಿಸಿ ವಿವಿಧ ಬ್ಯಾಂಕ್‍ಗಳಿಂದ ಕ್ರೆಡಿಕ್ ಕಾರ್ಡ್‍ಗಳನ್ನು ಪಡೆದು ಬ್ಯಾಂಕ್‍ ಗಳಿಗೆ ಲಕ್ಷಾಂತರ ರೂಪಾಯಿ ವಂಚಿಸಿ, ಮೋಜಿನ ಜೀವನ ಹಾಗೂ, ವಿದೇಶ ಪ್ರವಾಸ ಮಾಡುತ್ತಿದ್ದ ಇಬ್ಬರು ಖದೀಮರು ಸೈಬರ್ ಕ್ರೈಂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಸಹಕಾರ ನಗರದ ನಿರನ್ ಜಯಪಾಲ್ ಆಲಿಯಾಸ್ ಫೈರೋಜ್ (37), ದಕ್ಷಿಣ ಕನ್ನಡ ಜಿಲ್ಲೆಯ ಕೋಟೆಕಾರ್ನ್‍ನ ಅಬೂಬಕ್ಕರ್ ಆಲಿಯಾಸ್ ಸಾದಿಕ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 25 ಲಕ್ಷ ಮೌಲ್ಯದ ಚಿನ್ನಾಭರಣಗಳು, ಗೃಹ ಉಪಯೋಗಿ ವಸ್ತುಗಳು, ನಕಲಿ ದಾಖಲಾತಿಗಳನ್ನು ಸೃಷ್ಟಿಸಲು ಬಳಸುತ್ತಿದ್ದ ಲ್ಯಾಪ್ ಟಾಪ್, ಟ್ಯಾಬ್, ಪ್ರಿಂಟರ್, ಮೊಬೈಲ್ ಗಳು, ಕಾರು, ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ತಿರುವನಂತಪುರಂ ಮೂಲದ ನಿರನ್ ಜಯಪಾಲ್, ಜೈಬಾಲ್, ಫೈರೋಜ್, ನರೇನ್. ಜೆ.ನರೇನ್ ಇನ್ನಿತರ ಹೆಸರುಗಳಲ್ಲಿ ಸಾದಿಕ್, ಪ್ರವೀಣ್ ರಾಜ್, ಪ್ರಕಾಶ್, ಸಂತೋಷ್ ಪ್ರಧಾನ್ ಇನ್ನಿತರ ಹೆಸರುಗಳಲ್ಲಿ ಎಂಜಿ ರಸ್ತೆಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಸಲಿ ಎಂದು ನಂಬಿಸಿ ವಿವಿಧ ಬ್ಯಾಂಕ್ ಗಳಿಂದ ಕ್ರೆಡಿಟ್ ಕಾರ್ಡ್ ಗಳನ್ನು ಪಡೆದು ಬ್ಯಾಂಕ್‍ ಗಳಿಗೆ ಲಕ್ಷಾಂತರ ವಂಚನೆ ಮಾಡಿದ್ದರು. ಆರೋಪಿಗಳು ನಕಲಿ ಚುನಾವಣಾ ಗುರುತಿನ ಚೀಟಿಗಳು, ಚಾಲನಾ ಪರವಾನಗಿ, ಪ್ರತಿಷ್ಠಿತ ಬ್ಯಾಂಕ್‍ಗಳ ನಕಲಿ ಗುರುತಿನ ಪತ್ರಗಳನ್ನು ಸೃಷ್ಟಿಸಿ ಪ್ಯಾನ್‍ಕಾರ್ಡ್‍ಗಳನ್ನು ಪಡೆಯಲು ನೈಜ ದಾಖಲೆಗಳೆಂದು ಬ್ಯಾಂಕ್‍ಗಳಿಗೆ ಸಲ್ಲಿಸಿ ಸಿಮ್ ಕಾರ್ಡ್, ಪ್ಯಾನ್‍ಕಾರ್ಡ್ ಪಡೆದು ನಕಲಿ ವಿಳಾಸದ ದಾಖಲೆಗಳನ್ನು ಸಲ್ಲಿಸಿ ಕ್ರೆಡಿಕ್ ಕಾರ್ಡ್‍ಗಳನ್ನು ಪಡೆದು ಸ್ವಲ್ಪ ಅವಧಿಗೆ ವಿಶ್ವಾಸಾರ್ಹತೆ ಬೆಳೆಸಿ ತದನಂತರ ಕಾರ್ಡಿನ ಮಿತಿಯನ್ನು ಹೆಚ್ಚು ಮಾಡಿಕೊಂಡು ಚಿನ್ನಾಭರಣ ಅಂಗಡಿಗಳು, ಎಲೆಕ್ಟ್ರಾನಿಕ್ಸ್ ಮಳಿಗೆಗಳಲ್ಲಿ ದುಬಾರಿ ಬೆಲೆಯ ವಸ್ತುಗಳನ್ನು ಖರೀದಿಸಿ ನಂತರ ಕಡಿಮೆ ಬೆಲೆಗೆ ಮಾರಾಟ ಮಾಡಿ ವಿಲಾಸಿ ಜೀವನ ನಡೆಸುತ್ತಿರುವುದಲ್ಲದೆ, ವಿದೇಶ ಪ್ರವಾಸ ಕೈಗೊಂಡಿರುವುದು ತನಿಖೆಯಲ್ಲಿ ಕಂಡುಬಂದಿದೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿ ಅವರ ವಂಚನಾ ಜಾಲವನ್ನು ಪತ್ತೆಹಚ್ಚಲಾಗುತ್ತದೆ ಎಂದು ಸೈಬರ್ ಪೊಲೀಸರು ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ