ವಿಚ್ಚೇದಿತ ಪತಿ ಎದುರೇ ಪತ್ನಿಯ ಹೊಸ ಮದುವೆ !

Kannada News

07-07-2017

ಬೆಂಗಳೂರು: ಹದಿನೈದು ವರ್ಷಗಳ ಹಿಂದೆ  ಸಂಪ್ರದಾಯಬದ್ಧವಾಗಿ ವಿವಾಹವಾಗಿದ್ದ ಮಹಿಳೆಯೋರ್ವಳು ಮೊದಲ ಗಂಡನಿಗೆ ವಿಚ್ಛೇದನ ನೀಡಿ ಆತನ ಸಮ್ಮಖದಲ್ಲೇ ತಾನು ಇಷ್ಟಪಟ್ಟ ಯುವಕನ ಜೊತೆ ವಿವಾಹವಾಗಿರುವ ವಿಚಿತ್ರ ಘಟನೆ ಚಿಂತಾಮಣಿಯಲ್ಲಿ ನಡೆದಿದೆ. ತನ್ನದೇ ಒಡೆತನದ ಶಾಲೆಯಲ್ಲಿ ಚಾಲಕನಾಗಿದ್ದವನನ್ನು ಪ್ರೀತಿಸಿ ಇದೀಗ ಗಂಡನ ಸಮ್ಮುಖದಲ್ಲಿಯೇ ಆತನನ್ನು ಮದುವೆಯಾಗಿರುವುದು ವಕೀಲೆ ಹಾಗೂ ರಾಜ್ಯ ರೈತ ಸಂಘದ ಮಹಿಳಾ ರಾಜ್ಯಾಧ್ಯಕ್ಷೆ ಎಸ್.ರಚನಾ ಇನ್ನು ಈ ಮದುವೆಗೆ ಸಾಕ್ಷಿಯಾಗಿರೋದು ಕೂಡ ಮಹಿಳೆಯ ವಿಚ್ಚೇದಿತ ಪತಿಯೇ ಎನ್ನುವುದು ಅಚ್ಚರಿ ತಂದರೂ  ನಿಜವಾಗಿದೆ. ತನ್ನ ಮಾಜಿ ಪತ್ನಿ ಮದುವೆ ಸಂದರ್ಭದಲ್ಲಿ ಆತ ಕೂಡ ಅವರಿಬ್ಬರ ಜೊತೆ ನಿಂತು ಫೋಟೋ, ವೀಡಿಯೋಗೆ ಪೋಸ್ ಸಹ  ಕೊಟ್ಟಿದ್ದಾನೆ. ಚಿಂತಾಮಣಿ ಅಶ್ವಿನಿ ಬಡಾವಣೆಯ ನಿವಾಸಿದಲ್ಲಿ ಎಸ್.ರಚನಾ ಚಿಂತಾಮಣಿಯ ಪೆದ್ದೂರಿನ  ವಕೀಲ ಈಶ್ವರಗೌಡನನ್ನು ಕಳೆದ 15 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ  ಒಂದು ಹೆಣ್ಣು ಹಾಗೂ ಒಂದು ಗಂಡು ಮಗ ಕೂಡ ಇದೆ. ಆದರೆ ಸಂಸಾರದಲ್ಲಿ ಅನ್ಯೋನ್ಯತೆ ಇಲ್ಲದೇ ಅವರಿಬ್ಬರು 2016ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ, ವಿಚ್ಛೇದನ ಪಡೆದಿದ್ದರು. ವಿಚ್ಛೇದನ ನೀಡಿ ಅಶ್ವಿನಿ ನಡೆಸುತ್ತಿದ್ದ ರಚನಾ ಕ್ರಿಯೇಟಿವ್ ಖಾಸಗಿ ಶಾಲೆಯ ವ್ಯಾನ್ ಚಾಲಕ ಮಂಜುನಾಥನನ್ನು ವಿಚ್ಚೇದಿತ ಗಂಡನ ಸಮ್ಮುಖದಲ್ಲೇ ಮದುವೆಯಾಗಿದ್ದಾರೆ. ಮನೆಯ ದೇವರಗುಡಿಯ ಮುಂದೆ ಮಂಜುನಾಥ್ ರಚನಾಗೆ ತಾಳಿ ಕಟ್ಟಿ, ಹಾರ ಬದಲಾಯಿಸಿಕೊಳ್ಳುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಅಲ್ಲದೆ ರಚನಾಳ ಮದುವೆಯಾದ ಮಂಜುನಾಥ್‍ನಿಗೆ ಕೆಲವರು ಗೂಸಾ ಕೊಟ್ಟಿದ್ದು, ಈ ಪ್ರಕರಣ ನಗರ ಠಾಣೆಯ ಮೆಟ್ಟಲೇರಿತ್ತು. ನಂತರ ಠಾಣೆಯಲ್ಲಿ ರಾಜಿ ಪಂಚಾಯಿತಿ ಮೂಲಕ ಸಮಸ್ಯೆ ಬಗೆಹರಿದಿದೆ. ಇನ್ನು ಮರು ಮದುವೆಯಾಗಿರುವ ವಕೀಲೆ ರಚನಾ ತಾನು ವಿಚ್ಛೇದನ ಪಡೆದಿದ್ದು, ನನ್ನ ಜೀವನದ ಮುಂದಿನ ಹಾದಿಗೆ ನನ್ನನ್ನು ಇಷ್ಟಪಡುವವರನ್ನು ಮದುವೆಯಾಗಿದ್ದೇನೆ ಎಂದಿದ್ದಾರೆ. ಇತ್ತ ಈಶ್ವರಗೌಡ ಕೂಡ ಮಾಜಿ ಪತ್ನಿ ಅಶ್ವಿನಿ ಚೆನ್ನಾಗಿರಲಿ ಅಂತ ನಾನೇ ಈ ಮದುವೆಯನ್ನು ಬೆಂಬಲಿಸಿದ್ದೇನೆ ಎಂದಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ