ವಿಮೆ ಹಣಕ್ಕಾಗಿ ಪಾದಯಾತ್ರೆ !

Kannada News

07-07-2017

ಬಳ್ಳಾರಿ: ಕಳೆದ ಸಾಲಿನಲ್ಲಿ ಮಳೆ ಅಭಾವದಿಂದ ಉಂಟಾದ ಬೆಳೆ ನಷ್ಟಕ್ಕೆ, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನಯಡಿ ರೈತರ ವಿಮಾ ಹಣ ನೀಡುವಂತೆ ಒತ್ತಾಯಿಸಿ, ಸಂಸದ ಶ್ರೀರಾಮುಲು ಮತ್ತು ಶಾಸಕ ನಾಗೇಂದ್ರ ನೇತೃತ್ವದಲ್ಲಿ ಸಾವಿರಕ್ಕೂ ಹೆಚ್ಚು ರೈತರು ಪಾದಯಾತ್ರೆ ಮಾಡಿದ್ದಾರೆ. ಸುಮಾರು 18 ಕಿಲೋ ಮೀಟರ್ ಪಾದಯಾತ್ರೆ ಮಾಡಿದ ಇವರು, ಜಿಲ್ಲೆಯ ಬಣವಿ ಕಲ್ಲಿನಿಂದ ಕೂಡ್ಲಿಗಿ ವರೆಗೂ ಪಾದಯಾತ್ರೆ ನಡೆಸಿದರು. ಪಾದಯಾತ್ರೆಯ ನಂತರ ಬೆಳೆ ನಷ್ಟಕ್ಕೆ ಯೋಜನೆಯಡಿ ವಿಮಾ ಹಣ ನೀಡುವಂತೆ ಒತ್ತಾಯಿಸಿದ್ದಾರೆ.  ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ