ಕಳ್ಳ ಬಟ್ಟಿ ಸಾರಾಯಿ ವಶ !

Kannada News

07-07-2017

ಬೆಳಗಾವಿ: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 5 ಲೀಟರ್ ಕಳ್ಳ ಬಟ್ಟಿ ಸಾರಾಯಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಐಗಳಿ ಪೊಲೀಸ್ ಠಾಣೆ ವ್ಯಾಪ್ತಿಯ, ಕೊಕಟನೂರ ಗ್ರಾಮದಲ್ಲಿ ಅಕ್ರಮ ಕಳ್ಳ ಬಟ್ಟಿ ಸಾರಾಯಿ ದಂಧೆ ಕಂಡುಬಂದಿದ್ದೂ, ಈ ಕುರಿತು ಲಾಡಪ್ಪ ನಾಗಪ್ಪ ಬಾಗಡಿ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಅಥಣಿ, ಚಿಕ್ಕೋಡಿ, ರಾಯಬಾಗದ ಅಬಕಾರಿ ಇಲಾಖೆ ಜಂಟಿ ತಂಡ ದಾಳಿ ನಡೆಸಿ, ಕಳ್ಳಬಟ್ಟಿ ಸರಾಯಿ ಮತ್ತು ತಯಾರಿಸಲು ಬಳಸುತ್ತಿದ್ದ ಸಾಮಗ್ರಿಗಳನ್ನು ಜಪ್ತಿ ಮಾಡಿದ್ದಾರೆ. ಐಗಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದೂ ಮುಂದಿನ ತನಿಖೆ ಕೈಗೊಂಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

ಬೆಳಗಾವಿ ಕಳ್ಳ ಬಟ್ಟಿ ಸಾರಾಯಿ ವಶ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ