ನಗದಲ್ಲಿ ಮೆಟ್ರೋ ಸಂಚಾರ ಸಂಪೂರ್ಣ ಸ್ತಬ್ಧ !

Kannada News

07-07-2017 288

ಬೆಂಗಳೂರು: ಪೊಲೀಸ್ ಮತ್ತು ಮೆಟ್ರೋ ಸಿಬ್ಬಂದಿ ನಡುವೆ ಮಾರಾಮಾರಿ ವಿಚಾರರಕ್ಕೆ ಸಂಬಂಧಿಸಿದಂತೆ, ಇದೇ ಮೊದಲ ಮೊದಲ ಬಾರಿಗೆ ಮೆಟ್ರೋ ಸಂಚಾರ ಬಂದ್ ಮಾಡಲಾಗಿದೆ. ಇದರಿಂದ ಬೆಂಗಳೂರಿನಲ್ಲಿ ಮೆಟ್ರೋ ಸಂಚಾರ ಸಂಪೂರ್ಣ ಸ್ತಬ್ಧವಾಗಿದ್ದೂ, ಮೆಟ್ರೋ ಸಿಬ್ಬಂದಿಯ ಆರು ಜನ ಸಿಬ್ಬಂದಿ ಬಂಧನ ಹಿನ್ನೆಲೆ ಈ ಕ್ರಮ ಕೈಗೊಂಡಿರುವುದಾಗಿ ತಿಳಿದು ಬಂದಿದೆ. ಆರು ಜನರನ್ನು ಬಿಡುಗಡೆ ಮಾಡುವವರೆಗೂ ಮೆಟ್ರೋ ಸಂಚಾರವಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ. ಬೈಯ್ಯಪ್ಪನ ಹಳ್ಳಿಯ ಮೆಟ್ರೋ ನಿಲ್ದಾಣದಲ್ಲಿ ಸಿಬ್ಬಂದಿಗಳು ಪ್ರತಿಭಟನೆ ಪ್ರಾರಂಭವಾಗಿದ್ದೂ, ಇದರಿಂದ ಎಲ್ಲಾ ಎಲ್ಲಾ ಮೆಟ್ರೋ ನಿಲ್ದಾಣಗಳ ಶೆಟರ್ ಕ್ಲೋಸ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಯಾಣಿಗೆ ಟೆಕ್ನಿಕಲ್ ಪ್ರಾಬ್ಲಮ್ ಎಂದು ಹೇಳಿ ವಾಪಸ್ ಕಳುಹಿಸುತ್ತಿರುವುದಾಗಿಯೂ ತಿಳಿದು ಬಂದಿದೆ. ಮೆಟ್ರೋ ಸಿಬ್ಬಂದಿಗಳ ಪರವಾಗಿ ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್  ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಡಿಸಿಪಿಗಳಾದ ಹರ್ಷ, ಅಜಯ್ ಹಿಲೋರಿ, ಹೆಚ್ಚವರಿ ಪೊಲೀಸ್ ಆಯುಕ್ತ ಹೇಮಂತ್ ಲಿಬಾಳ್ಕರ್ ಆಗಮಿಸಿದ್ದೂ, ಕಾನೂನು ಕ್ರಮ ಕೈಗೊಳ್ಳುವ ಮುನ್ನ ಪ್ರತಿಭಟನೆ ಕೈಬಿಡುವಂತೆ ಮೆಟ್ರೋ ಸಿಬ್ಬಂದಿಗಳಿಗೆ, ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಮನವಿ ಮಾಡಿದ್ದಾರೆ. ಅಲ್ಲದೇ ಮೆಟ್ರೋ ಸಿಬ್ಬಂದಿಗಳು ಪ್ರತಿಭಟನೆ ಯನ್ನು ಹಿಂಪಡೆಯದಿದ್ದರೆ ಎಸ್ಮಾ ಜಾರಿಗೆ ಚಿಂತನೆ ನಡೆಸುತ್ತಿರುವುದಾಗಿಯೂ ತಿಳಿದು ಬಂದಿದೆ. ಪ್ರತಿಭಟನಾಕಾರರಿಗೆ ಸೂಕ್ತ ತೀರ್ಮಾನಕ್ಕೆ ಸಮಯ ನೀಡಿದ್ದೂ, ಪ್ರತಿಭಟನೆ ನಿರತ ಮೆಟ್ರೋ ಸಿಬ್ಬಂದಿ ಹಾಗೂ ಯೂನಿಯನ್ ಜೊತೆ ಮಾತುಕತೆ ಮುಂದುವರೆದಿದೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ