ತೆಲುಗು ಚಿತ್ರ ನಟನ ಬಂಧನ !

Kannada News

07-07-2017

 ಕೋಲ್ಕತ್ತ: ಖಾಸಗಿ ವಾಹಿನಿಯೊಂದರ ನಿರೂಪಕಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ತೆಲುಗಿನ ಚಿತ್ರ ನಟ ವಿಕ್ರಮ್ ಚಟರ್ಜಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಖಾಸಗಿ ವಾಹಿನಿಯ ನಿರೂಪಕಿಯಾದ ಸೋನಾಕ್ಷಿ ಚೌಹಾನ್ ಎಂಬುವರು ಕಾರು ಅಪಘಾತದಲ್ಲಿ ಮೃತ ಪಟ್ಟಿದ್ದರು. ಈ ಘಟನೆಯು ಕಳೆದ ಏಪ್ರಿಲ್ ನಲ್ಲಿ ಕೊಲ್ಕತ್ತಾದಲ್ಲಿ ಜರುಗಿತ್ತು. ನಿರೂಪಕಿ ಸೋನಾಕ್ಷಿ ಚೌಹಾನ್, ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ, ಕಾರು ಚಲಾಯಿಸುತ್ತಿದ್ದ ವಿಕ್ರಮ್ ಚಟರ್ಜಿ ಮದ್ಯ ಸೇವಿಸಿ, ಮತ್ತಿನಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ ಈ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದ್ದೂ, ಇದನ್ನು ಚಿತ್ರ ನಟ  ಚಟರ್ಜಿ ನಿರಾಕರಿಸುತ್ತಲೇ, ತಲೆ ಮರೆಸಿಕೊಂಡಿದ್ದರು. ಇದೀಗ ಪೊಲೀಸು ಈತನನ್ನು ಬಂಧಿಸಿದ್ದಾರೆ. ಈ ವಿಚಾರ ಪಶ್ಚಿಮ ಬಂಗಾಳದ ತೃಣ ಮೂಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ರಾಜಕೀಯ ಸಮರಕ್ಕೂ ಎಡೆ ಮಾಡಿಕೊಟ್ಟಿತ್ತು. ಚಟರ್ಜಿ ಹೇಳುವಂತೆ ನಾನು ಸೋನಾಕ್ಷಿಯವರು ಒಳ್ಳೆ ಸ್ನೇಹಿತರು, ಅಂದು ನಾನು ಕಾರು ಚಲಾಯಿಸುವಾಗ ಮದ್ಯ ಸೇವಿಸಿರಲಿಲ್ಲ ಅಪಘಾತವೂ ಆಕಸ್ಮಿಕವಾಗಿ ಸಂಭವಿಸಿದ್ದೂ, ಸೋನಾಕ್ಷಿ ಅವರನ್ನು ಕೊಲ್ಲುವ ಉದ್ದೇಶ ನನಗಿಲ್ಲ ಎಂದಿದ್ದಾರೆ. ಅಲ್ಲದೇ ನನಗೂ ನನ್ನ ಸ್ನೇಹಿತೆಯನ್ನು ಕಳೆದುಕೊಂಡಿರುವ ದುಖ:ವಿದೆ ಎಂದರು. ಒಟ್ಟಾರೆ ಇದೀಗ  ಚಿತ್ರ ನಟ ವಿಕ್ರಮ್ ಚಟರ್ಜಿಯನ್ನು ಪೊಲೀಸರು ಬಂಧಿಸಿದ್ದೂ, ತನಿಖೆ ನಂತರವಷ್ಟೇ ಸತ್ಯಾಂಶ ಗೊತ್ತಾಗಲಿದೆ.            ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ