ಬಿಎಂಟಿಸಿ ಹಾಗೂ ನಮ್ಮ ಮೆಟ್ರೊ ನಡುವೆ ಸಾಮರಸ್ಯ.. ಆರ್ಥಿಕ ನೆರವಿಗಾಗಿ ರಾಜ್ಯ ಸರ್ಕಾರಕ್ಕೆ ಪತ್ರ

Kannada News

06-07-2017

ಬೆಂಗಳೂರು,ಜು.6-ನಗರದಲ್ಲಿ ಸಂಚರಿಸಿಸುವ ಬಿಎಂಟಿಸಿ ಹಾಗೂ ನಮ್ಮ ಮೆಟ್ರೊ ನಡುವಿನ ಸಾಮರಸ್ಯದ ಕೊರತೆಯಿಂದ ಎರಡೂ ಸಂಸ್ಥೆಯಲ್ಲಿ ಆರ್ಥಿಕ ನಷ್ಟ ಉಂಟಾಗುತ್ತಿದ್ದು ಎರಡು ಸಂಸ್ಥೆಗಳು ಪರಸ್ಪರ ಆರೋಪ ಮಾಡುತ್ತಾ ನಷ್ಟ ತುಂಬಲು ಹಣಕಾಸಿನ ನೆರವಿಗೆ ಧಾವಿಸುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿವೆ. 
ಮೆಟ್ರೊಗೆ ಫೀಡರ್ ಸೇವೆ ಸಲ್ಲಿಸುತ್ತಿರುವುದರಿಂದ ನಮಗೆ ವಾರ್ಷಿಕ 16 ಕೋಟಿ ರೂ. ನಷ್ಟವಾಗಿದ್ದು ನೆರವಿಗೆ ಬರಬೇಕೆಂದು ಬಿಎಂಟಿಸಿ ಮನವಿ ಮಾಡಿದರೆ. ಬಿಎಂಟಿಸಿ ಅಸಹಕಾರದಿಂದ ಮೆಟ್ರೊದಲ್ಲಿ ಜನ ಸಂಚರಿಸುತ್ತಿಲ್ಲ. ಇದೀಗ ನಾವು ನಷ್ಟಕ್ಕೊಳಗಾಗುತ್ತಿದ್ದೇವೆ ಎಂದು ಬಿಎಂಆರ್‍ಸಿಎಲ್ ಪತ್ರ ಬರೆದಿದೆ.
ಪೂರ್ವ-ಪಶ್ಚಿಮ, ಉತ್ತರ-ದಕ್ಷಿಣ ಕಾರಿಡಾರ್‍ಗಳು ಅದಾಗಲೇ ಕಾರ್ಯನಿರ್ವಹಿಸುತ್ತಿವೆ. ಮೊದಲ ಹಂತದಲ್ಲಿ ಮೆಟ್ರೊ ಬೆಂಗಳೂರು ನಗರ ಕೇಂದ್ರಭಾಗದ 42.3 ಕಿ.ಮಿ. ವ್ಯಾಪ್ತಿಯನ್ನು ಸಂಪರ್ಕಿಸುತ್ತಿದೆ.ನಾಗಸಂದ್ರದಿಂದ ಯಲಚೇನಹಳ್ಳಿ ಮಾರ್ಗದ ಉದ್ದ 24.20 ಕಿ.ಮಿ. ಆಗಿದ್ದರೆ, ಬೈಯ್ಯಪ್ಪನಹಳ್ಳಿಯಿಂದ ಮೈಸೂರು ರಸ್ತೆ ಸಂಪರ್ಕಿಸುವ ಮಾರ್ಗ 18.1 ಕಿ.ಮಿ. ಇದೆ. ಈ ಮಾರ್ಗ ಸಂಪೂರ್ಣ ಬೆಂಗಳೂರನ್ನು ವ್ಯಾಪಿಸಿಲ್ಲ. ಈ ಎರಡೂ ಮಾರ್ಗದಲ್ಲಿ ಒಟ್ಟು 41 ನಿಲ್ದಾಣಗಳು ಬರುತ್ತವೆ. ಇದರಲ್ಲೂ ಮುಖ್ಯವಾಗಿ ನಾಲ್ಕೂ ಕಡೆಯ ನಿಲ್ದಾಣಗಳಿಂದ ಸೂಕ್ತ ಬಸ್ ಸಂಪರ್ಕ ಇದ್ದರೆ ಮಾತ್ರ ಮೆಟ್ರೊ ರೈಲು ಯಶಸ್ಸು ಗಳಿಸಲು ಸಾಧ್ಯ.
ಮೆಟ್ರೋ ಆಗಮನದಿಂದ ಬಿಎಂಟಿಸಿಗೆ ನಷ್ಟವಾಗುತ್ತಿದೆ ಎನ್ನುವುದು ನಿಜ. ಆದರೆ, ಸೂಕ್ತ ಫೀಡರ್ ಸೇವೆ ಪೂರೈಸಿದರೆ ಆಗಬಹುದಾದ ನಷ್ಟವನ್ನು ಬಿಎಂಟಿಸಿ ತಪ್ಪಿಸಿಕೊಳ್ಳಬಹುದಿತ್ತು. ಅದನ್ನೂ ಸರಿಯಾಗಿ ಮಾಡದ ಬಿಎಂಟಿಸಿ ತನಗೂ, ಮೆಟ್ರೊಗೂ ನಷ್ಟವಾಗುವಂತೆ ಮಾಡಿದೆ.ಎರಡು ಪ್ರಮುಖ ಸಮೂಹ ಸಾರಿಗೆಗಳಲ್ಲಿ ಮೂಡದ ಸಾಮರಸ್ಯದಿಂದಾಗಿ ನಿರೀಕ್ಷಿತ ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸದಂತೆ ಆಗಿದೆ. ನಿಗದಿಯಂತೆ ಮೆಟ್ರೊ ಮೊದಲ ಹಂತ ಮುಗಿದಿದೆ. ಇದಾದ ನಂತರ 4-5 ಲಕ್ಷ ಪ್ರಯಾಣಿಕರು ಸಂಚರಿಸುವ ನಿರೀಕ್ಷೆ ಹೊಂದಲಾಗಿತ್ತು. ಆದರೆ, ಬಿಎಂಟಿಸಿ ಸೂಕ್ತ ರೀತಿ ಸ್ಪಂದಿಸದ ಕಾರಣ ಪ್ರಯಾಣಿಕರ ಸಂಖ್ಯೆ 3.5 ಲಕ್ಷ ಮಂದಿಯನ್ನು ಕೂಡ ಮೀರುತ್ತಿಲ್ಲ.
ಇನ್ನೊಂದೆಡೆ ಮೆಟ್ರೊಗೆ ಫೀಡರ್ ಸೇವೆ ಸಲ್ಲಿಸುತ್ತಿರುವುದರಿಂದ ನಮಗೆ ವಾರ್ಷಿಕ 16 ಕೋಟಿ ರೂ. ನಷ್ಟವಾಗಿದೆ. ಇದರಿಂದ ನೀವೇ ನಮ್ಮ ನೆರವಿಗೆ ಬರಬೇಕೆಂದು ಮನವಿ ಮಾಡಿದೆ. ಒಂದೆಡೆ ಬಿಎಂಟಿಸಿ ಅಸಹಕಾರದಿಂದ ಮೆಟ್ರೊದಲ್ಲಿ ಜನ ಸಂಚರಿಸುತ್ತಿಲ್ಲ. ಇದೀಗ ನಾವು ನಷ್ಟಕ್ಕೊಳಗಾಗುತ್ತಿದ್ದೇವೆ ಎಂದು ಬಿಎಂಟಿಸಿ ಪತ್ರ ಬರೆದಿದೆ.
ರಿಯಾಯಿತಿ ಪಾಸ್ :- ಬಿಎಂಟಿಸಿ ಫೀಡರ್ ಸೇವೆ ಹಾಗೂ ಮೆಟ್ರೊ ಸಂಚಾರ ಎರಡಕ್ಕೂ ಒಂದು ಸಾಮಾನ್ಯ ಹಾಗೂ ರಿಯಾಯಿತಿ ದರದ ಪಾಸ್ ನೀಡಬೇಕಿದೆ. ಇದಿಲ್ಲದಿದ್ದರೆ ಎರಡೂ ಸೇವೆಗಳು ನಷ್ಟಕ್ಕೆ ಒಳಗಾಗಲಿವೆ. ಸದ್ಯ ಎಸ್‍ವಿ ರಸ್ತೆ ಹಾಗೂ ಬೈಯ್ಯಪ್ಪನಹಳ್ಳಿ ನಿಲ್ದಾಣಗಳಿಂದ ಫೀಡರ್ ಬಸ್‍ಗಳಿಗೆ ಮಾಸಿಕವಾಗಿ ಅಲ್ಪ ಅಂತರದ ಪಾಸ್ ನೀಡಲಾಗಿದೆ. ಇದು ಜನರನ್ನು ಬಸ್ ಹಾಗೂ ರೈಲು ಎರಡೂ ಕಡೆ ಸೆಳೆಯುವಂತೆ ಮಾಡಿದೆ. ಇದು ಎಲ್ಲಾ ಬಿಎಂಟಿಸಿ ಮಾರ್ಗದಲ್ಲಿಯೂ ಆಗಬೇಕೆಂಬುದು ಮೆಟ್ರೊ ಪ್ರಯಾಣಿಕರ ಬೇಡಿಕೆಯಾಗಿದೆ. ಆದರೆ ಅದಾಗಲೇ ನಷ್ಟವಾಗುತ್ತಿದೆ ಎಂದಿರುವ ಬಿಎಂಟಿಸಿ ಇದಕ್ಕೆ ಒಪ್ಪುವುದು ಕಷ್ಟಕರ.
53 ಬಸ್:
ನಾಗಸಂದ್ರದಿಂದ ಯಲಚೇನಹಳ್ಳಿ ಮಾರ್ಗದಲ್ಲಿ ಸದ್ಯ ಬಿಎಂಟಿಸಿಯ 53 ಫೀಡರ್ ಸೇವೆಯ ಬಸ್‍ಗಳು ಸಂಚರಿಸುತ್ತಿದ್ದು, ನಿತ್ಯ 689 ಬಾರಿ ಸಂಚರಿಸುತ್ತದೆ. ನಾಯಂಡಹಳ್ಳಿ-ಬೈಯ್ಯಪ್ಪನಹಳ್ಳಿ ಮಾರ್ಗದಲ್ಲಿ 90ಕ್ಕೂ ಹೆಚ್ಚು ಫೀಡರ್ ಸೇವೆ ಬಸ್‍ಗಳಿದ್ದು, ನಿತ್ಯ 1,168 ಬಾರಿ ಸಂಚರಿಸುತ್ತಿವೆ.ಪ್ರತಿ ಮೆಟ್ರೊ ನಿಲ್ದಾಣದಿಂದಲೂ ಕನಿಷ್ಠ 6-8 ಬಡಾವಣೆಗಳಿಗೆ ಸುಲಭ ಸಂಪರ್ಕ ಸಿಗುತ್ತಿದೆ. ಕನಿಷ್ಠ 5-6 ಕಿ.ಮಿ. ವ್ಯಾಪ್ತಿಯಲ್ಲಿ ಬಿಎಂಟಿಸಿ ಫೀಡರ್ ಸೇವೆ ಸಿಕ್ಕರೆ ಜನ ಮೆಟ್ರೊ ಸೇವೆಯನ್ನೂ ಬಳಸಿಕೊಳ್ಳುತ್ತಾರೆ. ಬಿಎಂಟಿಸಿಗೆ ಕೂಡ ಲಾಭ ಬರಬಹುದು ಎನ್ನುವ ಮಾತು ಕೇಳಿ ಬರುತ್ತಿದೆ.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ