ಸಿಎಂ ಸಿದ್ದರಾಮಯ್ಯನವರಿಂದ ಕಂದಾಯ ಇಲಾಖೆ ನೌಕರರ ಸಂಘದ ಸಮ್ಮೇಳನ ಉದ್ಘಾಟನೆ

Kannada News

06-07-2017

ಬೆಂಗಳೂರಿನ ಅರಮನೆ ಮೈದಾನದಲ್ಲಿ ಕರ್ನಾಟಕ ರಾಜ್ಯ ಕಂದಾಯ ಇಲಾಖಾ ನೌಕರರ ಸಂಘದ ವತಿಯಿಂದ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ,ಕಾನೂನು ಸಚಿವ ಟಿ.ಬಿ.ಜಯಚಂದ್ರ, ಸಚಿವ ಪ್ರಮೋದ ಮಧ್ವರಾಜ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜೇಗೌಡ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಕಂದಾಯ ಇಲಾಖೆ ನೌಕರರ ಸಂಘದ ಸಮ್ಮೇಳನದಲ್ಲಿ ಪಾಲ್ಗೊಂಡ ಸಿಎಂ ಸಿದ್ದರಾಮಯ್ಯನವರು ಸಮಾವೇಶವನ್ನು ಅತ್ಯಂತ ಸಂತೋಷದಿಂದ ಉದ್ಘಾಟನೆ ಮಾಡಿದ್ದೇನೆ..21ವರ್ಷಗಳ‌ ನಂತರ ಈ
ನೌಕರರ ಸಂಘದ ಸಮಾವೇಶ ನಡೆಯುತ್ತಿದೆ..ಸರ್ಕಾರಿ ಇಲಾಖೆಗಳಲ್ಲಿ ಕಂದಾಯ ಇಲಾಖೆ‌ ಪುರಾತನವಾದದ್ದು..ಬೇರೆ ಇಲಾಖೆಗಳಿಗಿಂತ ಕಂದಾಯ ಇಲಾಖೆ‌ ಮಹತ್ವದ್ದು. ವ್ಯವಸಾಯದ ಮೇಲೆ ಅವಲಂಬಿತ ಈಗ ಕಡಿಮೆಯಾಗಿದೆ. 47 ನೇ ಕಾಯ್ದೆಯಡಿಯಲ್ಲಿ ಕೆಲಸ ಮಾಡುವಂತ ಇಲಾಖೆ ಇದ್ದು..ಮನುಷ್ಯರ ಗಣತಿಯಿಂದ ಹಿಡಿದು ಪ್ರಾಣಿ ಗಣತಿ ವರೆಗೆ ನೋಡಿಕೊಳ್ಳೋದು ನಿಮ್ದೆ ಜವಬ್ದಾರಿ..ಯಾವುದೆ ಇಲಾಖೆಯಲ್ಲಿ ಕೆಲಸ ಮಾಡಿದ್ರು ನೀವು ಅದರಲ್ಲಿ ನೈಪುಣ್ಯ ತೆ ಗಳಿಸಿಕೊಳ್ಳಬೇಕು..ಸೃಜನಶೀಲ ಹಾಗೂ ಕ್ರಿಯಶೀಲರಾಗಿ ಮಾನವೀಯತೆಯಿಂದ ಇರಬೇಕು. ನೀವು ಮಾಡಿದಂತ ಕೆಲಸದಲ್ಲಿ ತೃಪ್ತಿ ಹೊಂದಿದರೆ ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ ಎಂದು ಮಾತನಾಡಿದರು.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ