ಭಾಗ್ಯ ಕೊಟ್ಟ ಸರ್ಕಾರಕ್ಕೆ ದೌರ್ಭಾಗ್ಯ

Kannada News

06-07-2017 242

ಸಿದ್ದರಾಮಯ್ಯನವರ ಸರ್ಕಾರ ಬಡವರಿಗೆ ನೀಡಿರುವ ಭಾಗ್ಯಗಳೇ ಅವರಿಗೆ ಮುಂದಿನ ಚುನಾವಣೆಯಲ್ಲಿ ಮುಳುವಾಗಬಹುದೇ ಎಂಬ ಚಿಂತೆ ಕಾಂಗ್ರೆಸ್ ಪಕ್ಷದವರನ್ನು ಕಾಡುತ್ತಿದೆ. ಆರಂಭದಲ್ಲಿ ಅನ್ನಭಾಗ್ಯ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತಂದಾಗ ಅದು ಒಂದು ಕ್ರಾಂತಿಕಾರಕ ಯೋಜನೆ ಎಂದು ಬಣ್ಣಿಸಲಾಗುತ್ತಿತ್ತು ಮತ್ತು ಅದರ ಬಗ್ಗೆ ಮಾತನಾಡುತ್ತಾ ಗ್ರಾಮೀಣ ಪ್ರದೇಶದಲ್ಲೂ ಕಾಂಗ್ರೆಸ್ಸಿಗರು ರಾಜಕೀಯ ಲಾಭ ಪಡೆದುಕೊಳ್ಳುತ್ತಿದ್ದರು, ಆದರೆ ಆನಂತರ ತಂದ ಅನೇಕ ಕಾರ್ಯಕ್ರಮಗಳ ಕಾರಣದಿಂದಾಗಿ ಅನ್ನಭಾಗ್ಯದ ಪ್ರಾಮುಖ್ಯತೆ ಕಡಿಮೆಯಾಯಿತು. ಈಗಂತೂ ಮಾತಿಗೊಂದು ಭಾಗ್ಯ ಕೊಡುತ್ತಾ ಫಲಾನುಭವಿಗಳೂ ಕೂಡ ಆ  ಭಾಗ್ಯಗಳನ್ನು ಗುರುತಿಸಿ ಲಾಭಪಡೆಯಲು ಸಾಧ್ಯವಿಲ್ಲದಂತೆ ಆಗಿಬಿಟ್ಟಿದೆ. ಹಾಗೇ ಕೆಲವೊಂದು ಭಾಗ್ಯಗಳು ಬರೀ ಸರ್ಕಾರದ ದಾಖಲೆಯಲ್ಲಿ ಮಾತ್ರ ರಾರಾಜಿಸುತ್ತಿವೆ. ಭಾಗ್ಯಗಳ ಪಟ್ಟಿಯಲ್ಲಿರುವ ಕೆಲವು ಅರ್ಥವಿಲ್ಲದ ಕಾರ್ಯಕ್ರಮಗಳ ಹೆಸರುಗಳನ್ನು ನೋಡಿ ಜನ ಮುಸಿ ಮುಸಿ ನಗುತ್ತಿದ್ದಾರೆ. ಸರ್ಕಾರ ಮಾಡಬೇಕಾದ ಸರಳ ಕೆಲಸಗಳನ್ನೂ ಭಾಗ್ಯಗಳೆಂದು ಕರೆದು ಮಂಕುಬೂದಿ ಎರೆಚಲಾಗುತ್ತಿದೆ ಎಂದು ಜನ ಆಪಾದಿಸುತ್ತಿದ್ದರೆ. ಸರ್ಕಾರ ಭಾಗ್ಯಗಳ ಫಲಿತಾಂಶದ ಮೂಲಕ ಪುನಃ ಅಧಿಕಾರಕ್ಕೆ ಬರುವ ಆಸೆಯನ್ನಿಟ್ಟುಕೊಂಡಿದ್ದರೂ ಜನ ಭಾಗ್ಯ ಪಡೆದು ಕಾಂಗ್ರೆಸ್ಸಿಗೆ ಮರಳಿ ಅಧಿಕಾರ ಭಾಗ್ಯ ನೀಡುವ ಯಾವುದೇ ಲಕ್ಷಣಗಳಿಲ್ಲ ಎನ್ನಲಾಗುತ್ತಿದೆ. 


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ