ಪ್ರಧಾನಿ ಮೋದಿ ಟೀಕಿಸಿದ ರಾಹುಲ್ ವಿರುದ್ದ ಹರಿಹಾಯ್ದ ಯಡಿಯೂರಪ್ಪ

Kannada News

06-07-2017

ಬಾಗಲಕೋಟೆ : ಪ್ರಧಾನಿ ಮೋದಿಯವರನ್ನು ಟೀಕಿಸಿದ ರಾಹುಲ್ ವಿರುದ್ದ ಹರಿಹಾಯ್ದ ಯಡಿಯೂರಪ್ಪನವರು ರಾಹುಲ್ ಗಾಂಧಿಗೆ ಮೈಂಡ್  ಮೆಚುರಿಟಿ ಆಗಿಲ್ಲ. ಪ್ರಧಾನಿ ವಿರುದ್ದ ಮಾತನಾಡಿ ಇದ್ದಷ್ಟು ಕಿಂಚಿತ್ತು ಗೌರವವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದರಷ್ಟೇ ಅಲ್ಲದೇ ಸಿದ್ದರಾಮಯ್ಯ ಅಮಿತ್ ಶಾ ಬಗ್ಗೆ ಹೇಳಿಕೆ ವಿಚಾರವಾಗಿಯೂ ಸಿಎಂಗೆ ಮಾನ ಮಯಾ೯ದೆ ಇದ್ರೆ ರಾಜ್ಯದ ಜನರ ಕ್ಷಮೆ ಕೇಳಲಿ. ಸಿಎಂ ನ್ಯಾಯಾಲಯಕ್ಕೆ ಅಪಮಾನ ಮಾಡುವ ಕೆಲ್ಸ ಮಾಡಿದ್ದಾರೆ. ಕೋರ್ಟ್ನಲ್ಲಿ ಯಾವ ರೀತಿ ಮುಂದುವರೆಯಬೇಕೆಂಬ ಚಚೆ೯ ಮಾಡುತ್ತಿದ್ದೇವೆ. ಸಿಎಂ ಉತ್ತರ ಕನಾ೯ಟಕದಿಂದ ಸ್ಪಧೆ೯ ಮಾಡಲ್ಲ, ಅವರು ಮೈಸೂರಿನ ಭಾಗದಲ್ಲೆ ಇತಾ೯ರೆ, ಅವರಿಗೆ ಅಲ್ಲೆ ಮುಕ್ತಿ ತೋರಸ್ತೀವಿ. ಸಿದ್ದರಾಮಯ್ಯ ತಲೆ ತಿರುಕ ಮಾತನಾಡ್ತಾರೆ ಆದ್ರೆ ಪರಮೇಶ್ವರ ಮಾತಾಡಿದ್ದು ನಿರೀಕ್ಷಿಸಿರಲಿಲ್ಲ. ಸಿಎಂ ಇಷ್ಟು ವಷ೯ವಾದ್ರೂ ದಲಿತರ ಗೋಳು ಕೇಳಿಲ್ಲ. ದಲಿತರ ಬಗ್ಗೆ ಮಾತನಾಡೋ ಹಕ್ಕು ಸಿಎಂಗೆ ಇಲ್ಲ. ನಾನು ಪ್ರಬಲವಾಗಿರೋದ್ರಿಂದ ಸಿಎಂ ಕಣ್ಣು ನನ್ನ ಮೇಲೆ ಬಿದ್ದಿದೆ, ದುಬ೯ಲರ ಮೇಲೆ ಅವರ ಕಣ್ಣು ಬೀಳೋದಿಲ್ಲ. ನನಗೆ ದೈವ ಬಲ, ಜನ ಬಲವಿದೆ ಇದಕ್ಕಾದರೂ ಸಿಎಂ ಹೆದರಲೇಬೇಕು ಎಂದು ಸಿಎಂ ವಿರುದ್ಧ ಗುಡುಗಿದರು. ಇದೇ ವೇಳೆ ರೈತರಂತೆ ನೇಕಾರರ ಸಾಲಮನ್ನಾ ಮಾಡಲು ಯಡಿಯೂರಪ್ಪ ಆಗ್ರಹಿಸಿದರು.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ