ರಹಸ್ಯವಾಗಿ ವಿವಾಹವಾದ ಸಲಿಂಗಿಗಳು

Kannada News

05-07-2017

ಬೆಂಗಳೂರು, ಜು.5-ಇಬ್ಬರು ಸಲಿಂಗಿಗಳು ನಗರದಲ್ಲಿ ರಹಸ್ಯವಾಗಿ ವಿವಾಹವಾಗಿ ಜೊತೆಯಾಗಿ ವಾಸಿಸುತ್ತಿರುವುದು ಪತ್ತೆಯಾಗಿದೆ ಸುಮಾರು 25 ವರ್ಷ ವಯಸ್ಸಿನ ಸಲಿಂಗಕಾಮಿ ಮಹಿಳೆಯೊಬ್ಬರು ದೇವಾಲಯವೊಂದರಲ್ಲಿ ಮತ್ತೊಬ್ಬ ಸಲಿಂಗಿ ಯುವತಿಯನ್ನು ವಿವಾಹ ಮಾಡಿಕೊಂಡಿದ್ದಾರೆ ಇವರ ವಿವಾಹದ ವಿರುದ್ದ ಪೋಷಕರು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ.
ಮದುವೆಯಾದ ಸಲಿಂಗಿಗಳು ದೂರದ ಸಂಬಂಧಿಗಳು. ಶಿಲ್ಪಾ (ಹೆಸರು ಬದಲಾಯಿಸಲಾಗಿದೆ) ನಗರದ ಖಾಸಗಿ ಕಾಲೇಜೊಂದರಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದರೆ, ಮೊತ್ತೊಬ್ಬ ಯುವತಿ ಸಹನಾ ಕಾಲ್‍ಸೆಂಟರ್‍ನಲ್ಲಿ ಕೆಲಸ ಮಾಡುತ್ತಿದ್ದಾಳೆ
ಶಿಲ್ಪಾ ಪ್ರೌಢಾವಸ್ಥೆಯಲ್ಲಿದ್ದಾಗ ಸಹನಾಗೆ ಆಕೆಯ ಮೇಲೆ ಮೋಹ ಉಂಟಾಗಿದ್ದು ಆಕೆ ಸಂಪ್ರದಾಯಸ್ಥ ಕುಟುಂಬದಿಂದ ಬಂದಿದ್ದರಿಂದ ಶಿಲ್ಪಾಗೆ  ಸಹನಾ ಆಧುನಿಕ ಜಗತ್ತಿನ ಪರಿಚಯ ಮಾಡಿಕೊಟ್ಟಿದ್ದಾಳೆ ಮಾಲ್‍ಗಳಿಗೆ ಕರೆದೊಯ್ದು, ಪಾಶ್ಚಿಮಾತ್ಯ ಬಟ್ಟೆಗಳನ್ನು ಖರೀದಿಸಿಕೊಡುವುದು ದುಬಾರಿ ಉಡುಗೊರೆ ಕೂಡಿಸಿ ಸೆಳೆದುಕೊಂಡಿದ್ದಾಳೆ.
ಒಂದು ದಿನ  ಸಹನಾ ಶಿಲ್ಪಾಳೊಂದಿಗೆ ಪ್ರೀತಿಯ ನಿವೇದನೆ ಮಾಡಿಕೊಂಡಿದ್ದು ಆರಂಭದಲ್ಲಿ ತಿರಸ್ಕರಿದ ಶಿಲ್ಪಾ ನಂತರ ಒಪ್ಪಿದ್ದಾಳೆ.ನಂತರ ಇಬ್ಬರಲ್ಲೂ  ಗಾಢ ಸಂಬಂದ ಬೆಳೆಯುತ್ತದೆ
ನಮ್ಮಿಬ್ಬರ ಸಂಬಂಧಕ್ಕೆ ಪೋಷಕರು ಒಪ್ಪಲಾರರು ಎಂದು ಭಾವಿಸಿ 2017 ಮೇ ತಿಂಗಳಲ್ಲಿ ಅವರಿಬ್ಬರೂ ಮನೆಬಿಟ್ಟು ಓಡಿಹೋಗುತ್ತಾರೆ. ಕಿರಿಯ ಯುವತಿ ಪೇಯಿಂಗ್ ಗೆಸ್ಟ್ ಒಂದರಲ್ಲಿ ಉಳಿದುಕೊಳ್ಳುತ್ತಾಳೆ. ಹಿರಿಯವಳು ನೆಲೆಸುತ್ತಾಳೆ. ಎರಡು ವಾರಗಳಲ್ಲಿ ಕೋರಮಂಗಲದ ಬಾಡಿಗೆ ಮನೆಗೆ ತಮ್ಮ ವಾಸವನ್ನು ಸ್ಥಳಾಂತರಿಸುತ್ತಾರೆ.
ಇದೇ ವೇಳೆ ಶಿಲ್ಪಾಳ ಪೋಷಕರು ತಮ್ಮ ಮಗಳು ಕಾಣೆಯಾಗಿದ್ದಾರೆ ಎಂದು ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ. ಅವರಿಬ್ಬರೂ ಕೋರಮಂಗಲದ ಬಾಡಿಗೆ ಮನೆಯಲ್ಲಿ ಇರುವುದನ್ನು ಪೊಲೀಸರು ಪತ್ತೆ ಹಚ್ಚುತ್ತಾರೆ. ಆದರೆ ಅವರಿಬ್ಬರೂ ವಯಸ್ಕರು ಎಂದು ಹೇಳಿ ಪೊಲೀಸರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಪೊಲೀಸರ ಆಗಮನದಿಂದ ಬೆದರಿದ ಅವರಿಬ್ಬರೂ ವಕೀಲರು ಹಾಗೂ ಎನ್‍ಜಿಒ ಒಂದನ್ನು ಸಂಪರ್ಕಿಸಿ ತಮ್ಮ ನೋವು ತೋಡಿಕೊಂಡು, ನಾವು ಮನೆಗೆ ಹಿಂದಿರುಗುವುದಿಲ್ಲ, ನಾವಿಬ್ಬರೂ ಸಂತೋಷದಿಂದ ಬದುಕುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಮದುವೆಯ ವಿಷಯ ತಿಳಿಯುತ್ತಿದ್ದಂತೆ ಇಬ್ಬರ ಪೋಷಕರು ಪೊಲೀಸ್ ಠಾಣೆ ಹತ್ತಿದ್ದಾರೆ. ಆದರೆ ಇಬ್ಬರು ಮಹಿಳೆಯರು ವಯಸ್ಕರು ಮತ್ತು ಅವರಿಬ್ಬರೂ ಒಪ್ಪಿಕೊಂಡೇ ಜೀವನ ನಡೆಸುತ್ತಿದ್ದಾರೆ. ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ಪೊಲೀಸರು ಕೂಡ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಈ ಬಗ್ಗೆ ವನಿತಾ ಸಹಾಯವಾಣಿ ಸಂಪರ್ಕಿಸುವಂತೆ ಸೂಚಿಸಿದ್ದಾರೆ.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ವನಿತಾ ಸಹಾಯವಾಣಿಯ ಹಿರಿಯ ಕೌನ್ಸಿಲರ್ ಬಿ.ಎಸ್. ಸರಸ್ವತಿ ಅವರು ಇಬ್ಬರು ಮಹಿಳೆಯರನ್ನು ಕೌನ್ಸಿಲಿಂಗ್ ಮಾಡುತ್ತಿದ್ದಾರೆ.
ದೇಶದಲ್ಲಿ ಸಲಿಂಗಕಾಮ ಅಪರಾಧ ಎಂದು ಪರಿಗಣಿಸಲಾಗಿದೆ. ಯಾವುದೇ ವ್ಯಕ್ತಿ, ಮಹಿಳೆ ಅಥವಾ ಪ್ರಾಣಿಯೊಂದಿಗೆ ಪ್ರಕೃತಿ ವಿರೋಧವಾಗಿ ಲೈಂಗಿಕತೆ ನಡೆಸಿದರೆ ಅದು ಶಿಕ್ಷಾರ್ಹ ಅಪರಾಧ. ಅವರಿಗೆ ಜೀವಾವಧಿ ಅಥವಾ 10 ವರ್ಷ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಮಾತ್ರವಲ್ಲ ಅವರಿಗೆ ದಂಡ ವಿಧಿಸಲು ಕಾನೂನು ಅನುಮತಿಸಿದೆ.
ಆದರೆ ಪರ್ಯಾಯ ಕಾನೂನು ವೇದಿಕೆಯ ಗೌತಮನ್ ರಂಗ ಅವರ ಪ್ರಕಾರ, ಅವರಿಬ್ಬರು ವಯಸ್ಕರು. ಸೆಕ್ಷನ್ 377ರಡಿ ಅವರಿಗೆ ಶಿಕ್ಷೆ ನೀಡಲು ಅವಕಾಶವಿಲ್ಲ ಎಂದು ಅಭಿಪ್ರಾಯ ಪಡುತ್ತಾರೆ.
ಸಲಿಂಗಕಾಮಿ ಮದುವೆಯನ್ನು ದೇಶದಲ್ಲಿ ಪರಿಗಣಿಸುವುದಿಲ್ಲ. ಸೆಕ್ಷಣ್ 377ರ ಪ್ರಕಾರ ಅದು ಶಿಕ್ಷಾರ್ಹ ಅಪರಾಧ. ಆದರೆ ಅವರಲ್ಲಿ ಒಬ್ಬರು ದೂರು ನೀಡಬೇಕು. ಇಲ್ಲಿ ಇಬ್ಬರ ಪೋಷಕರು ದೂರು ನೀಡಿದ್ದಾರೆ. ಆದರೆ ಐಪಿಸಿ ಸೆಕ್ಷನ್ 377ರಡಿ ದೂರು ನೀಡಿಲ್ಲ ಎಂದು ಹೇಳುತ್ತಾರೆ.
ಇದೀಗ ಈ ಪ್ರಕರಣದಲ್ಲಿ ಕಾನೂನು ಬಿಕ್ಕಟ್ಟು ಸೃಷ್ಟಿಯಾಗಿದ್ದು, ಯಾವ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ .ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ