ವಿವಾಹವಾಗಲು ಹೆಣ್ಣು ಸಿಗದಿದ್ದರಿಂದ ಮನನೊಂದ ಯುವಕನೊಬ್ಬ ನೇಣಿಗೆ ಶರಣು

Kannada News

05-07-2017

ಬೆಂಗಳೂರು, ಜು. 5 - ವಿವಾಹವಾಗಲು ಹೆಣ್ಣು ಸಿಗದಿದ್ದರಿಂದ ಮನನೊಂದ ಯುವಕನೊಬ್ಬ ನೇಣಿಗೆ ಶರಣಾಗಿರುವ ದುರ್ಘಟನೆ ವೈಯ್ಯಾಲಿಕಾವಲ್‍ನಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ವೈಯ್ಯಾಲಿಕಾವಲ್‍ನ 10ನೇ ಮುಖ್ಯರಸ್ತೆಯ ಶಿವರಾಜ್ (28) ಎಂದು ಗುರುತಿಸಲಾಗಿದೆ.ಗಾರೆ ಕೆಲಸ ಮಾಡಿಕೊಂಡು ತಾಯಿ ಜೊತೆ ವಾಸಿಸುತ್ತಿದ್ದ ಶಿವರಾಜ್‍ಗೆ ಕಳೆದ ಕೆಲ ದಿನಗಳಿಂದ ವಿವಾಹಮಾಡಲು ಹೆಣ್ಣು ನೋಡಲಾಗುತ್ತಿತ್ತು.
ಆದರೆ ಎಲ್ಲೂ ಆತನಿಗೆ ಸರಿಯಾದ ಯುವತಿ ಸಿಕ್ಕಿರಲಿಲ್ಲ ಅಲ್ಲದೇ ಯಾರೊಬ್ಬರೂ ವಿವಾಹವಾಗಲು ಒಪ್ಪದಿದ್ದರಿಂದ ನೊಂದಿದ್ದ.ಕೂಲಿ ಕೆಲಸ ಮಾಡುತ್ತಿದ್ದ ತಾಯಿ ನಿನ್ನೆ ಕೆಲಸಕ್ಕೆ ಹೋದ ನಂತರ ಒಂಟಿಯಾಗಿದ್ದ ಆತ ಮದುವೆಯಾಗದ ನೋವಿನಲ್ಲಿ ತಾಯಿಯ ಸೀರೆಯಿಂದ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವೈಯ್ಯಾಲಿಕಾವಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ