ವಿದ್ಯುತ್ ತಂತಿ ತಗುಲಿ ದುರಂತ.. ಎಚ್ಚೆತ್ತುಕೊಳ್ಳದ ಬೆಸ್ಕಾಂ ಅಧಿಕಾರಿಗಳು

Kannada News

05-07-2017

ಬೆಂಗಳೂರು,ಜು.5-ಬಾಣಸವಾಡಿಯ ಕರಿಯಣ್ಣಪಾಳ್ಯದಲ್ಲಿ ಮನೆಯ ಬಳಿ ಹಾದು ಹೋಗಿದ್ದ ವಿದ್ಯುತ್ ತಂತಿ ತಗುಲಿ 16 ವರ್ಷದ ಬಾಲಕ ಜೀವನ್ಮರಣ ಹೋರಾಟ ನಡೆಸುತ್ತಿರುವ ದಾರುಣ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಮಗನ ಪರಿಸ್ಥಿತಿ ಕಂಡು ತಾಯಿ ಕಂಗಾಲಾಗಿದ್ದಾರೆ.
ವಿದ್ಯುತ್ ತಂತಿ ತಗುಲಿ ಅಸ್ವಸ್ಥಗೊಂಡ ಕೆವಿನ್‍ನನ್ನು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತನ ದೇಹದ ಎಡಭಾಗ ಬಹುತೇಕ ಸುಟ್ಟುಹೋಗಿತ್ತು ಚಿಕಿತ್ಸೆ ನೀಡಿದ ಆತನನ್ನು ಉಳಿಸಲು ಎರಡೂ ಕೈಗಳನ್ನು ತೆಗೆದಿದ್ದಾರೆ.ಮಗನ ಪರಿಸ್ಥಿತಿಯಿಂದ ತಾಯಿ ವಿದ್ಯಾ ಕಂಗಾಲಾಗಿದ್ದಾರೆ.
ಕಳೆದ ಜೂ.21ರಂದು ಮನೆ ಪಕ್ಕದಲ್ಲೇ ಇದ್ದ ವಿದ್ಯುತ್ ಕಂಬದಿಂದ ಹಾದು ಹೋಗಿದ್ದ ವಿದ್ಯುತ್‍ತಂತಿಯಿಂದ ಈ ದುರಂತ ಸಂಭವಿಸಿ ಎರಡು ವಾರಗಳು ಕಳೆದರೂ ಬೆಸ್ಕಾಂ ಅಧಿಕಾರಿಗಳು ಜೀವನ್ಮರಣ ಹೋರಾಟ ನಡೆಸಿರುವ ಕೆವಿನ್ ಚಿಕಿತ್ಸೆಗೆ ಸ್ಪಂದಿಸಿಲ್ಲ.ಬಾಲಕನ ಚಿಕಿತ್ಸೆಗೆ 1 ಲಕ್ಷ ಪರಿಹಾರ ನೀಡಿ ಕೈತೊಳೆದುಕೊಂಡಿದ್ದಾರೆ.ಆದರೆ ಕೆವಿನ್ ಚಿಕಿತ್ಸೆಗೆ ದಿನವೊಂದಕ್ಕೇ ಒಂದೂವರೆ ಲಕ್ಷ ತಗುಲುತ್ತಿದ್ದು ಚಿಕಿತ್ಸೆಯ ವೆಚ್ಚ ಭರಿಸುವ ಶಕ್ತಿ ಇಲ್ಲದೆ ಕೆವಿನ್ ತಾಯಿ ಸಹಾಯಕ್ಕಾಗಿ ಎದುರು ನೋಡುತ್ತಿದ್ದಾರೆ.
ಈ ನಡುವೆ ಕೆವಿನ್ ದುರಂತ ನಡೆದಿದ್ದರೂ  ಬೆಸ್ಕಾಂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಕರಿಯಣ್ಣ ಪಾಳ್ಯದ 2 ನೇ ಮುಖ್ಯ ರಸ್ತೆಯಲ್ಲಿರುವ ಬಹುತೇಕ ಮನೆಗಳ ಮುಂದೆ ಹಾಕಿರುವ ವಿದ್ಯುತ್ ತಂತಿಗಳು ತೀರ ಹತ್ತಿರದಲ್ಲವೆ ಮನೆಗೆ ಕೇವಲ ಒಂದು ಅಡಿ ಅಂತರವಿದ್ದರೂ ಅವುಗಳ ತೆರವಿಗೆ ಯಾವುದೇ ಕ್ರಮ ಕೈಗೊಂಡಿಲ್ಲದಿರುವುದು  ಬೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ