ಬಳ್ಳಾರಿಯಲ್ಲಿ ನಾಲ್ಕೂವರೆ ಕೋಟಿ ಪಂಗನಾಮ ಹಾಕಿ ವ್ಯಕ್ತಿಯೋರ್ವ ಪರಾರಿ

Kannada News

05-07-2017

ಬಳ್ಳಾರಿ : ಅತಿ ಆಸೆ ಗತಿಗೇಡು ಎನ್ನುವ ಮಾತು ಗೊತ್ತಿದ್ರು, ನಮ್ಮ ಜನ ಮೋಸ ಹೋಗದಂತೂ ಇಂದಿಗೂ ತಪ್ಪುತ್ತಿಲ್ಲ. ತಮ್ಮ ಹಣಕ್ಕೆ ನಾಲ್ಕರಿಂದ ಹತ್ತರಷ್ಟು ಹೆಚ್ಚುವರಿ ಬಡ್ಡಿಕೊಡುತ್ತೇನೆಂದು ಹೇಳಿದ ವ್ಯಕ್ತಿಯೊಬ್ಬನು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಪಟ್ಟಣ ದಲ್ಲಿ ನಾಲ್ಕೂವರೆ ಕೋಟಿ ಪಂಗನಾಮ ಹಾಕಿ ಪರಾರಿಯಾಗಿದ್ದಾನೆ. ಹಣ ಕಳೆದುಕೊಂಡ ಜನರೀಗ ಪೊಲೀಸ್ ಠಾಣೆಗೆ ಅಲೆಯುತ್ತಿದ್ದಾರೆ.
 ಬಡ್ಡಿ ಆಸೆಗೆ ಹೋದ ಜನರಿಗೆ ಮಣ್ಣುಮುಕ್ಕಿಸಿದ ಖದೀಮ.. ಕೆಟ್ಟ ಮೇಲೂ ನಮ್ಮ ಜನಕ್ಕೆ ಬುದ್ಧಿನೇ ಬರುತ್ತಿಲ್ಲ. ಮಸ್ಕಿ ಮೂಲದ ಮಹಮ್ಮದ್ ದಸ್ತಗಿರಿ ಎನ್ನುವ ವ್ಯಕ್ತಿ  ಕ್ರಾಸ್‍ಮಾಸ್  ಅಗ್ರಿಕೋಲ್ ಪ್ರೈವೇಟ್ ಲಿಮಿಟೆಡ್  ಎಂದು ನಕಲಿ ಕಂಪನಿಯನ್ನು ಸೃಷ್ಠಿಸಿದ್ದಾನೆ. ಶೇರು ಮಾರುಕಟ್ಟೆಯಲ್ಲಿ  ಬಂಡವಾಳ ಹೂಡಿದ್ರೇ ಕೆಲವೇ ದಿನಗಳಲ್ಲಿ ಹಣ ದ್ವಿಗುಣಗೊಳ್ಳುತ್ತದೆ ಎಂದು ನಂಬಿಸಿ 183 ಜನರಿಂದ ಸುಮಾರು ನಾಲ್ಕೂವರೆ ಕೋಟಿಯಷ್ಟು ಹಣವನ್ನು ವಸೂಲಿ ಮಾಡಿ ವಂಚನೆ ಮಾಡಿದ್ದಾನೆ.
ಮೊದಲಿಗೆ ಸಿರುಗುಪ್ಪದಲ್ಲಿ ಕಚೇರಿಯೊಂದನ್ನು ಸ್ಥಾಪಿಸಿ, ಬೆಂಗಳೂರಿನಲ್ಲೂ ದೊಡ್ಡದಾದ ಷೇರು ಮಾರುಕಟ್ಟೆ ಕಂಪನಿ ಮತ್ತು ರಿಯಲ್ ಎಸ್ಟೇಟ್ ಬಿಜಿನೆಸ್ ಇದೆ ಎಂದು ಜನರನ್ನು ನಂಬಿಸಿದ್ದಾನೆ. ಇದಕ್ಕೆ ಸಂಬಂಧಿಸದಂತೆ ಕೆಲ ಬಾಂಡ್ ಗಳನ್ನು ಜನರಿಗೆ ನೀಡಿದ್ದು, ಈತನ ನಾಟಕದ ಮಾತಿಗೆ ಮೋಸಹೋದವರು ಗ್ರಾಮೀಣ ಭಾಗದ ಮತ್ತು ಒಂದೇ ಜನಾಂಗದ ಜನರೇ ಹೆಚ್ಚಾಗಿರುವುದು ವಿಶೇಷ ವಾಗಿದೆ.  ಈ ಮೋಸದಾಟಕ್ಕೆ ಕೂಡಿಟ್ಟ ಹಣವನ್ನು ಮಹಿಳೆಯರು ಕೂಡ ಕಟ್ಟಿ ನಷ್ಟಕ್ಕೊಳಗಾಗಿದ್ದಾರೆ. ವಂಚನೆಗೊಳಗಾದವರೆಲ್ಲರೂ ಸಿರುಗುಪ್ಪ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಹುಡುಕಾಟ ನಡೆಸಿದ್ದಾರೆ. ಇದಕ್ಕೆ ಹೇಳೋದು ಮೋಸ                 ಹೋಗುವವರು ಇರೋವರೆಗೂ ಮೋಸ ಮಾಡುವವರು ಇರುತ್ತಾರೆ .ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ