ಇಂದಿನಿಂದ ಮೈಷುಗರ್ ಪುನರಾರಂಭ.. ಕಾರ್ಖಾನೆಗೆ ಪೂಜೆ ಮೂಲಕ ವಿದ್ಯುಕ್ತ ಚಾಲನೆ.

Kannada News

05-07-2017

ಮಂಡ್ಯ:-ಇಂದಿನಿಂದ ಮಂಡ್ಯ ಜಿಲ್ಲೆಯ ಮೈಷುಗರ್ ಕಾರ್ಖಾನೆ ಪುನರಾರಂಭಗೊಳ್ಳಲಿದೆ. ಹೋಮ-ಹವನ, ಪೂಜೆ ಮೂಲಕ ವಿದ್ಯುಕ್ತ ಚಾಲನೆ ದೊರೆಯಲಿದ್ದು, ಬೆಳಿಗ್ಗೆ 11ಗಂಟೆಗೆ ಕಬ್ಬು ನುರಿಸುವ ಕಾರ್ಯ ಆರಂಭವಾಗಲಿದೆ. ಪೂಜೆ ಮೂಲಕ, ಕಾರ್ಖಾನೆ ಪುನರಾರಂಭಕ್ಕೆ ರಾಜ್ಯ ಕಬ್ಬು ಆಯುಕ್ತ, ಮೈಷುಗರ್ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಚಾಲನೆ ನೀಡಲಿದ್ದಾರೆ. ಇದೇ ಜುಲೈ 11ರಂದು ಕೋಜನ್ ಘಟಕ ಆರಂಭವಾಗಲಿದ್ದು ಕೋಜನ್ ಘಟಕಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಸುಮಾರು ಎರಡೂವರೆ ವರ್ಷಗಳಿಂದ ಸ್ಥಗಿತಗೊಂಡಿದ್ದ ಈ ಕಾರ್ಖಾನೆಯ ಆರಂಭದಿಂದ ರೈತರ ಮೊಗದಲ್ಲಿ ಸಂತಸ ಮೂಡಿದೆ.


ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ