ಗಂಡನಿಂದಲೇ ಚಿನ್ನ ಕದ್ದ ಚಾಲಾಕಿ ಹೆಂಡತಿ !

Kannada News

04-07-2017

ಬೆಂಗಳೂರು: ಚೆಮ್ಮನ್ನೂರು ಜ್ಯುವೆಲ್ಲರ್ಸ್‍ನಿಂದ ಚಿನ್ನದ ಬಿಸ್ಕತ್ ಕದ್ದಿದ್ದ ಮಹಿಳೆಯೊಬ್ಬಳನ್ನು ಹಲಸೂರುಗೇಟ್ ಪೊಲೀಸರು ಬಂಧಿಸಿದ್ದಾರೆ. ನಾಗಲಕ್ಷ್ಮೀ ಬಂಧಿತ ಆರೋಪಿ. ಈಕೆ ಇತ್ತೀಚೆಗೆ ತನ್ನ ಗಂಡನೊಂದಿಗೆ ಚೆಮ್ಮನೂರು ಜುವೆಲ್ಲರಿಗೆ ಆಗಮಿಸಿದಾಗ ಚಿನ್ನದ ಬಿಸ್ಕತ್ತನ್ನು ಎಗರಿಸಿದ್ದಳು. ಈ ಬಗ್ಗೆ ಅಂಗಡಿಯ ವ್ಯವಸ್ಥಾಪಕ ವಿಲ್ಸನ್ ಎಂಬವರು ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಾಗಲಕ್ಷ್ಮೀ ಅವರ ಪತಿ ಇದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಅವರು ತಮಿಳುನಾಡಿಗೆ ಹೋಗಿ ಚಿನ್ನದ ಬಿಸ್ಕತ್ತನ್ನು ತರುತ್ತಿದ್ದರು. ಫೆ.20ರಂದು ಪತಿಯೊಂದಿಗೆ ಸೇಲಂಗೆ ಹೋಗಿದ್ದ ನಾಗಲಕ್ಷ್ಮೀ ಗಂಡನಿಗೆ ಗೊತ್ತಾಗದಂತೆ ಸುಮಾರು 1 ಕೆ.ಜಿಯಷ್ಟು ಚಿನ್ನದ ಬಿಸ್ಕತ್ತು ಕಳವು ಮಾಡಿದ್ದಳು. ಚಿನ್ನವನ್ನು ಕಳವು ಮಾಡಿ ಅದು ಕಳೆದು ಹೋಗಿದೆ ಎಂದು ಗಂಡನಿಗೆ ತಿಳಿಸಿದ್ದಳು. ಇದರಿಂದ ಅನುಮಾನಗೊಂಡ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಚಿನ್ನ ಕದ್ದು ಅಡಗಿಸಿಟ್ಟಿರುವುದನ್ನು ಒಪ್ಪಿಕೊಂಡಿದ್ದಾಳೆ ಎಂದು ಹಲಸೂರು ಗೇಟ್ ಪೊಲೀಸರು ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ